
ಶತಮಾನಗಳಿಂದ ಹೊತ್ತಿ ಉರಿಯುತ್ತಿರುವ ಜನಾಂಗೀಯ ದ್ವೇಷವು ಅಮೆರಿಕದಲ್ಲಿ ಮತ್ತೊಮ್ಮೆ ದೊಡ್ಡದಾಗಿ ಸದ್ದು ಮಾಡುತ್ತಿದ್ದು, ‘Black Lives Matter’ ಪ್ರತಿಭಟನೆಗಳಿಂದಾಗಿ ಈ ವಿಚಾರ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಜೂನ್ 4ರಂದು ಕೆನಡಾದ ನೋವಾ ಸ್ಕಾಟಿಯಾ ಎಂಬಲ್ಲಿ ವಿಮಾನವನ್ನು ಓಡಿಸುತ್ತಿದ್ದ ಪೈಲಟ್ ಡಿಮಿಟ್ರಿ ನಿಯೋನಾಕಿಸ್, ಮುಷ್ಠಿಯ ಆಕಾರ ಬರುವಂತೆ ವಿಮಾನ ಸರ್ಕ್ಯೂಟ್ ಒಂದನ್ನು ಗಿರಕಿ ಹೊಡೆಸಿದ್ದಾರೆ. ತಮ್ಮ ಈ ಫ್ಲೈಟ್ ಪಾತ್‌ನ ಸ್ಕ್ರೀನ್ ಶಾಟ್ ಅನ್ನು ಡಿಮಿಟ್ರಿ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
“ಅನೇಕ ಬಣ್ಣಗಳಿರುವ ಒಂದೇ ಜನಾಂಗದ ಜಗತ್ತನ್ನು ನಾನು ನೋಡುತ್ತಿದ್ದು, ಇಲ್ಲಿನ ನಾವೆಲ್ಲರೂ ಸಹ ಮುಕ್ತವಾಗಿ ಉಸಿರಾಡುವಂತಾಗಲಿ” ಎಂದು ಡಿಮಿಟ್ರೀ ಈ ಫೋಟೋ ಜೊತೆಗೆ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.