ಫೆಡರಲ್ ಬ್ಯುರೋ ಆಫ್ ಇನ್ಸ್ವೆಸ್ಟಿಗೇಷನ್ ತನಿಖೆಯಿಂದ ಜೇಮ್ಸ್ ಬಾಂಡ್ ರೀತಿಯಲ್ಲಿ ತಪ್ಪಿಸಿಕೊಳ್ಳಲು ಹೋದ ವ್ಯಕ್ತಿ ಸಿಕ್ಕಿ ಬಿದ್ದಿದ್ದಾನೆ. ನೀರಿನಾಳದಲ್ಲಿದ್ದ ವೇಳೆ ಬಾಯಿಯಿಂದ ಗುಳ್ಳೆ ಹೊರಬಂದ ಕಾರಣ 44 ವರ್ಷದ ಮ್ಯಾಥಿವ್ ಪೆರ್ಸಿ ಸಿಕ್ಕಿ ಬಿದ್ದಿದ್ದಾರೆ.
ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಫೆಡರಲ್ ಬ್ಯುರೋ ಆಫ್ ಇನ್ವೆಸ್ಟಿಗೇಷನ್ ನಡೆಸುತ್ತಿದ್ದ ತನಿಖೆಯನ್ನ ಪೆರ್ಸಿ ಎದುರಿಸುತ್ತಿದ್ದರು. ಆದರೆ ಈ ತನಿಖೆಯಿಂದ ಹೇಗಾದರೂ ಮಾಡಿ ಪಾರಾಗಬೇಕು ಎಂದು ನಿರ್ಧರಿಸಿದ್ದ ಪೆರ್ಸಿ ಸಮುದ್ರ ಮಾರ್ಗದಿಂದ ಎಸ್ಕೇಪ್ ಆಗೋಕೆ ಪ್ಲಾನ್ ಮಾಡಿದ್ದ.
ತನ್ನ ಯಮಹಾ ಸ್ಕೂಟರ್ ಬೈಕ್ನಲ್ಲಿ ಸುಮಾರು 25 ನಿಮಿಷಗಳ ಕಾಲ ಪೆರ್ಸಿ ನೀರಿನಲ್ಲಿ ಅಡಗಿ ಕುಳಿತಿದ್ದರು. ಆದರೆ ಕ್ಯಾಲಿಫೋರ್ನಿಯಾ ಸರೋವರದಲ್ಲಿ ಹೆಚ್ಚು ಕಾಲ ಉಸಿರುಗಟ್ಟಿ ನಿಲ್ಲುವಲ್ಲಿ ಪೆರ್ಸಿ ವಿಫಲರಾಗಿದ್ದಾರೆ. ಅವರ ಬಾಯಿಯಿಂದ ನೀರಿನ ಗುಳ್ಳೆ ಹೊರಹೊಮ್ಮಿದ್ದನ್ನ ಗಮನಿಸಿದ ಅಧಿಕಾರಿಗಳು ಆತನನ್ನ ಬಂಧಿಸಿದ್ದಾರೆ. ಪೆರ್ಸಿ ವಿರುದ್ಧ ಅಕ್ರಮ ಹಣ ಸಂಗ್ರಹ, ಆಸ್ತಿ ಕಬಳಿಕೆ, ಸಾಕ್ಷ್ಯ ನಾಶ ಸೇರಿದಂತೆ ಸಾಕಷ್ಟು ದೂರುಗಳು ದಾಖಲಾಗಿವೆ.