
ಸಿಕ್ಕಾಪಟ್ಟೆ ಹೊಟ್ಟೆ ಹಸಿದು ಆಹಾರ ಹುಡುಕುವ ವೇಳೆ ಕಾಡು ಮಂಗಗಳು ದಾಂಧಲೆ ಮಾಡುವ ಸಾಧ್ಯತೆಗಳು ಇರುತ್ತವೆ. ಇಂಥ ಸಮಯದಲ್ಲಿ ಕೋತಿಗಳ ಹಿಂಡೇನಾದರೂ ಕಣ್ಣೆದುರು ಕಂಡರೆ ಸಾಧ್ಯವಾದಷ್ಟು ದೂರ ಓಡಿ ಹೋಗದೇ ಬೇರೆ ದಾರಿ ಇರುವುದಿಲ್ಲ.
ಆದರೆ ಬ್ರಿಟನ್‌ನ ವಾದಕರೊಬ್ಬರು ಇಂಥದ್ದೇ ಮಂಗಗಳ ಹಿಂಡೊಂದಕ್ಕೆ ತಮ್ಮ ವಾದ್ಯದ ಮೂಲಕ ಸಮಾಧನಾ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ.
ಥಾಯ್ಲೆಂಡ್‌ನ ಲಾಪ್‌ಬುರಿ ಪ್ರದೇಶದಲ್ಲಿ ನೂರಾರು ಮಂಗಗಳ ಹಿಂಡೊಂದಕ್ಕೆ ತಮ್ಮ ಪಿಯಾನೋ ವಾದನದಿಂದ ಸಂತೈಸುತ್ತಿರುವ ಪೌಲ್ ಬಾರ್ಟನ್, ಬೀಥೋವನ್‌ರ ’ಫರ್ ಎಲೈಸ್’ ಹಾಗೂ ’ಗ್ರೀನ್‌ಸ್ಲೀವ್ಸ್’ ಟ್ಯೂನ್‌ಗಳಿಗೆ ತಮ್ಮ ಪಿಯಾನೋ ಮೂಲಕ ವಾದ್ಯ ನುಡಿಸಿ ಮನರಂಜಿಸಿದ್ದಾರೆ.
“ಮಂಗಗಳು ಸರಿಯಾಗಿ ತಿನ್ನುತ್ತವೆ ಎನ್ನುವುದನ್ನು ಖಾತ್ರಿ ಮಾಡುವ ಮೂಲಕ ಅವುಗಳು ಶಾಂತಚಿತ್ತತೆಯಿಂದ ಇರುವುದನ್ನು ಖಾತ್ರಿ ಪಡಿಸಿಕೊಂಡು ಅವುಗಳು ಆಕ್ರಮಣಶೀಲರಾಗದಂತೆ ನೋಡಿಕೊಳ್ಳಬೇಕು” ಎನ್ನುತ್ತಾರೆ 59ರ ಹರೆಯದ ಬಾರ್ಟನ್.