ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಮೇನಲ್ಲಿ ನಡೆದ ವಿಮಾನ ಪತನದ ರಹಸ್ಯ ತನಿಖೆಯಲ್ಲಿ ಬಯಲಾಗಿದೆ. ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ ಲೈನ್ಸ್ ವಿಮಾನ ಪತನವಾಗಲು ಪೈಲೆಟ್ ಗಳು ಮತ್ತು ಏರ್ ಕಂಟ್ರೋಲ್ ಟವರ್ ಸಿಬ್ಬಂದಿ ನಿರ್ಲಕ್ಷ್ಯ ಕಾರಣ ಎಂದು ಹೇಳಲಾಗಿದೆ.
ತಾಂತ್ರಿಕ ಸಮಸ್ಯೆಯಿಂದ ವಿಮಾನ ಪತನವಾಗಿಲ್ಲ ಎನ್ನುವುದು ಪ್ರಾಥಮಿಕ ವರದಿಯಲ್ಲಿ ಗೊತ್ತಾಗಿದೆ. ಪೈಲೆಟ್ ಮೊದಲ ಬಾರಿಗೆ ವಿಮಾನ ಇಳಿಸಲು ಪ್ರಯತ್ನಿಸಿದ ವೇಳೆ ವಿಮಾನದ ವೇಗ ಮತ್ತು ಎತ್ತರ ನಿಗದಿತ ಪ್ರಮಾಣಕ್ಕಿಂತ ಜಾಸ್ತಿಯಾಗಿತ್ತು ಎಂದು ಹೇಳಲಾಗಿದೆ. ಅಲ್ಲದೆ, ಪೈಲೆಟ್ ಗಳು ಮತ್ತು ಏರ್ ಕಂಟ್ರೋಲ್ ಟವರ್ ಸಿಬ್ಬಂದಿ ಹಲವು ತಪ್ಪುಗಳನ್ನು ಮಾಡಿರುವುದಾಗಿ ತನಿಖಾ ವರದಿಯಲ್ಲಿ ಉಲ್ಲೇಖಿಸಿರುವುದಾಗಿ ದಿ ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿಯಲ್ಲಿ ಹೇಳಲಾಗಿದೆ.