
ಮಿಲೆನಾ ಹೇರ್ ಸ್ಟೈಲ್ ಗೆ ಜನರು ಬೋಲ್ಡ್ ಆಗಿದ್ದಾರೆ. ಆಕರ್ಷಕ, ವಿಭಿನ್ನ, ಅಧ್ಬುತವಾಗಿ ಮಿಲೆನಾ ಹೇರ್ ಸ್ಟೈಲ್ ಮಾಡಿಕೊಂಡಿದ್ದಾಳೆ. ಅದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.
ಇನ್ಸ್ಟ್ರಾಗ್ರಾಮ್ ನಲ್ಲಿ ಮಿಲೆನಾ ಹೇರ್ ಸ್ಟೈಲ್ ಗೆ ಜನರು ಫಿದಾ ಆಗಿದ್ದಾರೆ. ಸಾಕಷ್ಟು ಲೈಕ್ಸ್, ಕಮೆಂಟ್ ಸಿಕ್ಕಿದೆ. ಆಕೆ ಜಡೆ ಹೆಣೆದಿರುವುದು ನೋಡುವುದೇ ಚಂದ. ಇದೊಂದು ಅದ್ಭುತ ಕಲೆ ಎಂದು ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮಿಲೆನಾ ಅಭಿಮಾನಿಗಳು ಹಾಗೂ ಕೇಶ ವಿನ್ಯಾಸಕರು ಆಕೆ ಕಲೆ ಕಲಿಯಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಒಂದು ಹೇರ್ ಸ್ಟೈಲ್ ಗೆ ಮಿಲೆನಾ ಒಂದು ಗಂಟೆ ಸಮಯ ತೆಗೆದುಕೊಳ್ತಾರೆ. ಆರನೇ ವಯಸ್ಸಿನಿಂದಲೂ ಇದ್ರಲ್ಲಿ ಮಿಲೆನಾ ಆಸಕ್ತಿ ಹೊಂದಿದ್ದರಂತೆ. ತಮ್ಮದೇ ಶೈಲಿಯಲ್ಲಿ ಹೇರ್ ಸ್ಟೈಲ್ ಮಾಡಲು ಮಿಲೆನಾ ಪ್ರಯತ್ನಿಸುತ್ತಾರೆ.

