ಜಾರ್ಜಿಯಾ: ಅಮೆರಿಕದ ಜಾರ್ಜಿಯಾ ರಾಜ್ಯದಲ್ಲಿ ಕೊರೊನಾ ವೈರಸ್ ಲಾಕ್‌ಡೌನ್ ನಂತರ ಸೋಮವಾರದಿಂದ ಕೆಲ ಶಾಲೆಗಳು ಮರು ಪ್ರಾರಂಭವಾಗಿವೆ. ಆದರೆ, ಪಾಲಕರು ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕಿತರಾಗಿದ್ದಾರೆ.
ಜಾರ್ಜಿಯಾದ ಪೌಲ್ಡಿಂಗ್ ಕಂಟ್ರಿಯ ಡೆಲ್ಲಾಸ್ ನ ನಾರ್ತ್ ಪೌಂಲ್ಡಿಂಗ್ ಹೈಸ್ಕೂಲ್ ತರಗತಿ ಪ್ರಾರಂಭಿಸಿದ್ದು, ಅಲ್ಲಿನ ಹಾಲ್ ಗೆ ತೆರಳುವ ದಾರಿಯಲ್ಲಿ ವಿದ್ಯಾರ್ಥಿಗಳು ಮಾಸ್ಕ್ ಧರಿಸದೆ, ಪರಸ್ಪರ ಅಂತರವಿಲ್ಲದೆ ಓಡಾಡುತ್ತಿರುವ ಫೋಟೋ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.
ಅಟ್ಲಾಂಟಾ ಶೈಕ್ಷಣಿಕ ಜಿಲ್ಲೆಯ ಎರಡು ಉಪ ನಗರದ ಶಾಲೆಗಳೂ ಸೋಮವಾರದಿಂದ ಪ್ರಾರಂಭವಾಗಿವೆ. “ಫೋಟೋದಲ್ಲಿನ ಚಿತ್ರಣ ಸಮರ್ಪಕವಾಗಿಲ್ಲ. ಆದರೆ ಇನ್ನು ಮುಂದೆ ಕೋವಿಡ್ -19 ನ ಎಲ್ಲ ನಿಯಮಾವಳಿ ಪಾಲನೆಯಾಗುವಂತೆ ನೋಡಿಕೊಳ್ಳಲಾಗುತ್ತದೆ” ಎಂದು ಪೌಲ್ಡಿಂಗ್ ಕಂಟ್ರಿ ಶಾಲೆಯ ಮೇಲ್ವಿಚಾರಕ ಡಾ.ಬ್ರೆಯಾನ್ ಒಟ್ಟೊಟ್ ಅವರು ಹೇಳಿದ್ದಾರೆ.
ಜಾರ್ಜಿಯಾದಲ್ಲಿ ಎರಡನೇ ತರಗತಿ ಕಲಿಯುತ್ತಿರುವ ವಿದ್ಯಾರ್ಥಿಯೊಬ್ಬ ಕೊರೊನಾ ಸೋಂಕಿಗೆ ತುತ್ತಾಗಿರುವುದು ಖಚಿತವಾಗಿದ್ದು, ಇನ್ನಷ್ಟು ಆತಂಕ ಮೂಡಿಸಲು ಕಾರಣವಾಗಿದೆ.
https://twitter.com/Freeyourmindkid/status/1290626349426671617?ref_src=twsrc%5Etfw%7Ctwcamp%5Etweetembed%7Ctwterm%5E1290626349426671617%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fphoto-of-mask-less-students-crammed-in-us-school-that-reopened-post-covid-19-causes-outrage-2760595.html
https://twitter.com/stonecold2050/status/1290670194046558212?ref_src=twsrc%5Etfw%7Ctwcamp%5Etweetembed%7Ctwterm%5E1290670194046558212%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fphoto-of-mask-less-students-crammed-in-us-school-that-reopened-post-covid-19-causes-outrage-2760595.html