ಮತದಾನ ಮಾಡುವ ವಯಸ್ಸಾದಾಗಿನಿಂದಲೂ ಒಮ್ಮೆಯೂ ಸಹ ಮತದಾನ ಮಾಡುವ ಅವಕಾಶ ಕಳೆದುಕೊಳ್ಳದ 102 ವರ್ಷದ ಮಹಿಳೆಯೊಬ್ಬರು ಸುದ್ದಿಯಲ್ಲಿದ್ದಾರೆ.
ಷಿಕಾಗೋ ಸಾರ್ವಜನಿಕ ಶಾಲೆಯೊಂದರಲ್ಲಿ ಶಿಕ್ಷಕಿಯಾದ ಬೀ ಲಂಪ್ಕಿನ್, 1940ರಿಂದ ಆಚೆ ನಡೆದಿರುವ ಪ್ರತಿಯೊಂದು ಚುನಾವಣೆಯಲ್ಲೂ ಸಹ ಮತದಾನ ಮಾಡಿದ್ದಾರೆ. 2020ರ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲೂ ಸಹ ಅವರು ಕೋವಿಡ್ ಸಾಂಕ್ರಮಿಕದ ನಡುವೆಯೇ ಸಕಲ ಮುನ್ನೆಚ್ಚರಿಕೆಗಳನ್ನು ಪಾಲಿಸಿಕೊಂಡು ಮತದಾನ ಮಾಡಿದ್ದಾರೆ.
ಪಿಪಿಇ ಸೂಟ್ ಧರಿಸಿಕೊಂಡು, ಮೇಲ್ ಬ್ಯಾಲೆಟ್ ಮೂಲಕ ಮತದಾನ ಮಾಡುತ್ತಿರುವ ಆಕೆಯ ಚಿತ್ರಗಳನ್ನು ಷಿಕಾಗೋ ಶಿಕ್ಷಕರ ಸಂಘ ತನ್ನ ಫೇಸ್ಬುಕ್ ಪೇಜ್ನಲ್ಲಿ ಹಂಚಿಕೊಂಡಿದೆ.