ನಿಮ್ಮ ಜೀವನದ ಅಂತ್ಯದ ಒಳಗೆ ನೀವು ಒಂದು ನಾಯಿಯನ್ನ ಸಾಕಿಲ್ಲ ಅಂದ್ರೆ ಅತ್ಯಂತ ಪರಿಶುದ್ಧವಾದ ಪ್ರೀತಿಯನ್ನ ನೀವು ಮಿಸ್ ಮಾಡಿಕೊಂಡಂತೆ ಅಂತಾ ಶ್ವಾನಪ್ರಿಯರು ಹೇಳ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೋವನ್ನ ನೋಡ್ತಿದ್ರೆ ಈ ಮಾತು ನಿಜ ಎಂದೆನಿಸುತ್ತೆ.
ಟ್ವಿಟರ್ನಲ್ಲಿ ಮಿಲಿಯನ್ಗಟ್ಟಲೇ ವೀವ್ಸ್ ಸಂಪಾದಿಸಿರುವ ಈ ವಿಡಿಯೋದಲ್ಲಿ ನಾಯಿಯೊಂದು ಶಾಲೆಯ ಬಸ್ ಬರೋದಕ್ಕೆ ಕಾಯ್ತಾ ಇರುತ್ತೆ. ಶಾಲಾ ವಾಹನದಿಂದ ಪುಟಾಣಿ ಹುಡುಗಿ ಇಳಿದಿದ್ದೇ ತಡ ಆಕೆಯ ಬ್ಯಾಗ್ನ್ನ ತನ್ನ ಬಾಯಿಯಲ್ಲಿ ಕಚ್ಚಿಕ್ಕೊಂಡು ಬರುತ್ತೆ.
ಪುಟಾಣಿ ತನ್ನ ಫ್ರೆಂಡ್ಸ್ಗೆಲ್ಲ ಗುಡ್ಬೈ ಹೇಳಿ ಅಲ್ಲಿಂದ ಹೊರಟ್ರೆ ಬ್ಯಾಗ್ ಹಿಡಿದುಕೊಂಡಿದ್ದ ನಾಯಿ ಬಾಲ ಅಲ್ಲಾಡಿಸುತ್ತಾ ನಿಂತಿರುತ್ತೆ. ಕ್ಯೂಟಾದ ಈ ವಿಡಿಯೋ ನೆಟ್ಟಿಗರ ಮನ ಕದ್ದಿದೆ.
https://twitter.com/akkitwts/status/1322559532891955200?ref_src=twsrc%5Etfw%7Ctwcamp%5Etweetembed%7Ctwterm%5E1322559532891955200%7Ctwgr%5Eshare_3&ref_url=https%3A%2F%2Fwww.indiatoday.in%2Ftrending-news%2Fstory%2Fpet-dog-carries-toddler-s-school-bag-in-adorable-viral-video-watch-1736954-2020-11-01