ಪ್ರಿಯತಮ ತನ್ನ ಪ್ರೇಯಸಿ ಮೇಲೆ ಹಲ್ಲೆ ಮಾಡುತ್ತಿದ್ದ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಯುವತಿಯನ್ನ ರಕ್ಷಿಸುವ ಮೂಲಕ ಶ್ವಾನವೊಂದು ಸ್ವಾಮಿನಿಷ್ಠೆ ತೋರಿದೆ. ಸ್ಟಾಫರ್ಡ್ಶೈರ್ ಬುಲ್ ಟೆರಿಯರ್ ಜಾತಿಯ ನಾಯಿ ನಡೆಸಿದ ದಾಳಿಯಿಂದಾಗಿ ಆತ ಎರಡು ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಗರ್ಭಿಣಿಯಾಗಿದ್ದ ತನ್ನ ಸಂಗಾತಿ ಮೇಲೆ ಹಲ್ಲೆ ನಡೆಸೋದಕ್ಕೂ ಮುನ್ನ ಈತ ಶ್ವಾನದ ಮೇಲೂ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಇದಾದ ಬಳಿಕ ಆತ ಯುವತಿಯ ಮುಖಕ್ಕೆ ಎರಡು ಭಾರಿ ಹೊಡೆದಿದ್ದರಿಂದ ಆಕೆಯ ಹಲ್ಲು ಮುರಿದು ಹೋಗಿದೆ. ಈ ವೇಳೆ ಮಧ್ಯಪ್ರವೇಶಿಸಿದ ಶ್ವಾನ ಆತನ ಮೇಲೆ ದಾಳಿ ನಡೆಸಿದೆ.
ಗೋವ್ ತನ್ನ ಸಂಗಾತಿಯೊಂದಿಗೆ ತಡರಾತ್ರಿಯವರೆಗೂ ಮದ್ಯಪಾನ ಮಾಡಿದ್ದ. ಕೋಪಗೊಂಡಿದ್ದ ಅವರಿಬ್ಬರು ಇನ್ನೇನು ಮಲಗಬೇಕು ಅನ್ನೋವಷ್ಟರಲ್ಲಿ ಗೋವ್ ಕ್ಯಾಬ್ ಬುಕ್ ಮಾಡೋಕೆ ನಿರ್ಧರಿಸಿದ್ದ. ಎಲ್ಲಿಗೆ ಹೋಗುತ್ತಿದ್ದೀಯಾ ಎಂದು ಕೇಳಿದ ಪ್ರಶ್ನೆಯಿಂದ ಕೆರಳಿದ ಆತ ಆಕೆಗೆ ಹೊಡೆದಿದ್ದಾನೆ. ಬಳಿಕ ನಾಯಿಯ ಮೇಲೆ ಆಕ್ರಮಣ ಮಾಡಿದ್ದಾನೆ.
ಬಳಿಕ ಮತ್ತೊಮ್ಮೆ ಗೆಳತಿ ಬಳಿ ಹೋದ ಆತ ಆಕೆಯ ಮುಖಕ್ಕೆ ಬಾರಿಸಿದ್ದಾನೆ. ಕೂಡಲೇ ಬಂದ ಶ್ವಾನ ಆತನನ್ನ ಬಲವಾಗಿ ಕಚ್ಚಿದೆ. ಆತನಿಗಾದ ಗಾಯಕ್ಕೆ ಹೊಲಿಗೆ ಹಾಕಲಾಗಿದ್ದು 2 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ.
ಇನ್ನೂ ಕುತೂಹಲಕಾರಿ ವಿಚಾರ ಅಂದ್ರೆ ಈ ಜೋಡಿ ಇನ್ನೂ ಒಟ್ಟಿಗೆ ಇದ್ದಾರೆ. ವಿಪರ್ಯಾಸದ ವಿಚಾರ ಅಂದರೆ ಅವರೀಗ ನಾಯಿಗೆ ಇನ್ನೊಂದು ಮನೆಯನ್ನ ಹುಡುಕ್ತಾ ಇದ್ದಾರಂತೆ.