ಲಂಡನ್: ಮೈಮೇಲೆ ಶಾಶ್ವತ ಟ್ಯಾಟೂ ಹಾಕಿಸಿಕೊಳ್ಳುವುದೇ ದೊಡ್ಡ ನಿರ್ಧಾರ. ಏಕೆಂದರೆ ಕೆಲ ದಿನಗಳ ನಂತರ ಅದು ಬೇಡ ಎನಿಸಿದರೆ ತೆಗೆಯಲು ಸಾಧ್ಯವಿಲ್ಲ. ಹೀಗಿರುವಾಗಲೂ ಮೈಮೇಲೆಲ್ಲ ಟ್ಯಾಟೂ ಹಾಕಿಸಿಕೊಳ್ಳುವ ಟ್ರೆಂಡ್ ಹೆಚ್ಚುತ್ತಿದೆ. ಇತ್ತೀಚೆಗೆ ಯುವತಿಯೊಬ್ಬಳು ತನ್ನಿಷ್ಟದ ಟ್ಯಾಟೂ ಹಾಕಿಸಿಕೊಂಡು ಖುಷಿಪಡುವ ವಿಡಿಯೋ ವೈರಲ್ ಆಗಿದೆ.
ಯುನೈಟೆಡ್ ಕಿಂಗ್ಡಂನ ಫೋಬೆ ಎಂಬ ಯುವತಿ ತಮ್ಮ ಬಲಗೈಗೆ ಹಾವಿನಂಥ ಅಂಕುಡೊಂಕಾದ ಗೆರೆಯನ್ನು ಬಿಡಿಸಿಕೊಂಡಿದ್ದಾರೆ. ಟ್ಯಾಟೂ ಹಾಕಿಸಿಕೊಳ್ಳಲು ಆಸೆ ಪಟ್ಟ ವರ್ಷದ ನಂತರ ಅವರಿಗೆ ಅದು ಸಾಧ್ಯವಾಗಿದ್ದು, ತಮ್ಮ ಖುಷಿಯನ್ನು ಟಿಕ್ಟಾಕ್ನಲ್ಲಿ ಹಂಚಿಕೊಂಡಿದ್ದಾರೆ. ಆಕೆಯ ಖುಷಿ ನೋಡಿ ಹಲವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನುಭವವನ್ನೂ ಹಂಚಿಕೊಂಡಿದ್ದಾರೆ.
ಜಿಪ್ ಕಿತ್ತೊಯ್ತು ಅಂತಾ ತಲೆ ಕೆಡಿಸಿಕೊಂಡಿದ್ದೀರಾ….? ಈ ವೈರಲ್ ವಿಡಿಯೋದಲ್ಲಿದೆ ಸಿಂಪಲ್ ಟ್ರಿಕ್..!
ಇನ್ನೊಂದು ಮುಖ್ಯ ಅಂಶ ಎಂದರೆ ಫೋಬೆ ಅವರು ಹಾಕಿಸಿಕೊಂಡ ಟ್ಯಾಟೂ ಚಿನ್ಹೆ ತಮ್ಮ ಮನೆಯ ಫ್ರಿಜ್ ಮೇಲಿರುವುದಂತೆ. ಫ್ರಿಜ್ನ ಲೋಗೊ ಕದ್ದು ತಾನು ಟ್ಯಾಟೂ ಮಾಡಿಕೊಂಡಿದ್ದಾಗಿ ಅವರು ವಿಡಿಯೋದಲ್ಲಿ ತಿಳಿಸಿದ್ದಾರೆ.
https://www.youtube.com/watch?v=Tkuk8sc7Izc&feature=emb_logo