ನ್ಯೂಯಾರ್ಕ್: ಕೊರೊನಾ ವೈರಸ್ ನಿಂದ ಬಚಾವಾಗಲು ಹಾಗೂ ಇನ್ನೊಬ್ಬರಿಗೆ ರೋಗ ಹರಡದಂತೆ ತಡೆಯಲು ಮಾಸ್ಕ್ ಧಾರಣೆಯನ್ನು ವಿಶ್ವದಾದ್ಯಂತ ಹಲವು ದೇಶಗಳು ಕಡ್ಡಾಯ ಮಾಡಿವೆ. ಸಾಕಷ್ಟು ಜಾಗೃತಿಯ ಬಳಿಕವೂ ಕೆಲವರು ಮಾಸ್ಕ್ ಧರಿಸದೇ ಹೊರಗೆ ಓಡಾಡುವುದು ಕಂಡು ಬರುತ್ತಿದೆ.
ಇದನ್ನು ತಡೆಯಲು ಪೊಲೀಸರು, ಸ್ಥಳೀಯ ಆಡಳಿತ ಕಟ್ಟುನಿಟ್ಟಿನ ಕ್ರಮ ವಹಿಸಿ, ದಂಡ ವಿಧಿಸಲು ಪ್ರಾರಂಭಿಸಿವೆ.
ಅಮೆರಿಕದ ಅಲೆನ್ ಪನ್ ಎಂಬುವವರು ಮಾಸ್ಕ್ ಧರಿಸದವರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರಯತ್ನವೊಂದನ್ನು ಮಾಡಿದ್ದಾರೆ.
ದೂರದಿಂದಲೇ ಮಾಸ್ಕ್ ತೊಡಿಸುವ ಗನ್ ಒಂದನ್ನು ಅವರು ಸಂಶೋಧಿಸಿದ್ದಾರೆ. ಅದರ ವಿಡಿಯೋವನ್ನು ಅವರು ಯುಟ್ಯೂಬ್ ನಲ್ಲಿ ಹಂಚಿಕೊಂಡಿದ್ದಾರೆ. ದೂರದಿಂದಲೇ ಶೂಟ್ ಮಾಡಿದರೆ ಮಾಸ್ಕ್ ಎದುರಿಗಿದ್ದವರ ಮುಖಕ್ಕೆ ಹೋಗಿ ಅಂಟಿಕೊಳ್ಳುತ್ತದೆ. ವಿಡಿಯೋ 1.59 ಲಕ್ಷ ವೀಕ್ಷಣೆಯನ್ನು ಪಡೆದಿದೆ.