ಲೂಸಿಯಾನದ ಸೇಂಟ್ ಮಾರ್ಟಿನ್ ಪ್ಯಾರಿಷ್ನಲ್ಲಿರುವ ಬರ್ಟನ್ ಪ್ಲಾಂಟೇಶನ್ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಡಿಯೋನ್ ಮೆರಿಕ್ ವಿಚಿತ್ರವಾದ ಘಟನೆಯೊಂದಕ್ಕೆ ಸಾಕ್ಷಿಯಾಗಿದ್ದಾರೆ .
ಅವರು ನಡೆದುಕೊಂಡು ಹೋಗುತ್ತಿದ್ದ ಪ್ಲಾಂಟೇಶನ್ ಮೈದಾನದಲ್ಲಿ ಬೆಳ್ಳಿ ಬಣ್ಣದ ಕಾರೊಂದು ಒಂಟಿಯಾಗಿ ನಿಂತಿದ್ದನ್ನ ಗಮನಿಸಿದ್ದಾರೆ. ಇದರಿಂದ ಗೊಂದಲಕ್ಕೆ ಒಳಗಾದ ಮೆರಿಕ್, ತನ್ನ ಸಹೋದ್ಯೋಗಿ ಬ್ರಾಂಡನ್ ಆಂಟೋಯಿನ್ಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಇಬ್ಬರು ಕಾರಿನ ಬಳಿ ತೆರಳುತ್ತಿದ್ದಂತೆಯೇ ಅದರಲ್ಲಿ 10 ವರ್ಷದ ಬಾಲಕಿ ಓರ್ವ ವ್ಯಕ್ತಿಯೊಂದಿಗೆ ಇದ್ದಿದ್ದನ್ನ ಮೆರಿಕ್ ಗಮನಿಸಿದ್ದಾರೆ. ಕೂಡಲೇ ಮೆರಿಕ್ ಸಹಾಯವಾಣಿಗೆ ಕರೆ ಮಾಡಿದ್ದು ಕಾರಿನಲ್ಲಿದ್ದ ವ್ಯಕ್ತಿ ತಪ್ಪಿಸಿಕೊಳ್ಳದಂತೆ ನಿರ್ಬಂಧಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಲಕಿಯನ್ನ ರಕ್ಷಿಸಿ ಅಪಹರಣಕಾರನನ್ನ ಬಂಧಿಸಿದ್ದಾರೆ.
ಅಪಹರಣಕಾರನ ವಿರುದ್ಧ ಕಿಡ್ನಾಪ್ ಹಾಗೂ ಲೈಂಗಿಕ ಅಪರಾಧದ ಪ್ರಕರಣ ದಾಖಲಾಗಿದೆ. ಇದು ಸಾಬೀತಾದ್ರೆ ಆತನಿಗೆ ಜೀವಾವಧಿ ಶಿಕ್ಷೆ ಸಿಗಲಿದೆ.