ಕೊರೊನಾ ವೈರಸ್ ಸೋಂಕಿತರು ಗುಣಮುಖವಾಗಿ ಮನೆಗೆ ಬಂದ್ರೂ ಅಪಾಯ ತಪ್ಪಿದ್ದಲ್ಲ. ರೋಗಿಗಳಿಗೆ ಪರೀಕ್ಷೆ ನಡೆಸಿದಾಗ ಕೊರೊನಾ ನೆಗೆಟಿವ್ ಬಂದ್ರೂ ಅವ್ರು ಸುರಕ್ಷಿತವಲ್ಲವೆಂದು ಸಂಶೋಧಕರು ಹೇಳಿದ್ದಾರೆ. ಸ್ಪೇನ್ ನಲ್ಲಿ ನಡೆದ ಸಂಶೋಧನೆಯಲ್ಲಿ ಇದು ಪತ್ತೆಯಾಗಿದೆ.
70 ಸಾವಿರ ಜನರ ಮೇಲೆ ಈ ಬಗ್ಗೆ ಅಧ್ಯಯನ ನಡೆದಿದೆ. ಕೊರೊನಾದಿಂದ ಚೇತರಿಸಿಕೊಂಡ ರೋಗಿಗಳಿಗೆ ವೈದ್ಯರು ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಸ್ಪೇನ್‌ನಲ್ಲಿ ನಡೆಸಿದ ಅಧ್ಯಯನದಲ್ಲಿ 2 ತಿಂಗಳ ನಂತರ ಪ್ರತಿಕಾಯಗಳು ಕಾಣೆಯಾಗಿರುವುದು ಕಂಡು ಬಂದಿದೆ, ವಿಶೇಷವಾಗಿ ಸೌಮ್ಯ ರೋಗ ಲಕ್ಷಣಗಳಿಂದ ಸೋಂಕಿಗೆ ಒಳಗಾದವರು. ಇದರ ನಂತರ, ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವ ಕರೋನಾ ರೋಗಿಗಳಲ್ಲಿ, ಪ್ರತಿಕಾಯಗಳು ದೊಡ್ಡ ಪ್ರಮಾಣದಲ್ಲಿ ಬೆಳವಣಿಗೆಯಾಗುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ,
ಕೊರೊನಾದಿಂದ ಹೊರಬಂದವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಬಹುದು. ಅಪೂರ್ಣವಾಗಬಹುದು. ರೋಗನಿರೋಧಕ ಶಕ್ತಿ ತಾತ್ಕಾಲಿಕವಾಗಿರಬಹುದು. ಇದ್ರಿಂದ ಸಮಸ್ಯೆ ಜಾಸ್ತಿ ಎಂದು ವೈದ್ಯರು ಹೇಳಿದ್ದಾರೆ.