ಗೃಹಿಣಿಯಾಗಿ ಮನೆಯ ಜವಾಬ್ದಾರಿ ನೋಡಿಕೊಳ್ಳುವ ಪತ್ನಿಯಂದಿರಿಗೆ ಪತಿ ಹಣ ಪಾವತಿ ಮಾಡಬೇಕು ಎಂದು ಚೀನಾದ ವಿಚ್ಛೇದನ ನ್ಯಾಯಾಲಯವು ಐತಿಹಾಸಿಕ ಆದೇಶ ನೀಡಿದೆ.
ಮನೆಯ ಜವಾಬ್ದಾರಿ ವಹಿಸಿಕೊಳ್ಳುವ ಮಹಿಳೆಯರಿಗೆ ವೇತನ ನೀಡದೇ ದುಡಿಸಿಕೊಳ್ಳೋದು ಸರಿಯಲ್ಲ. ಹೀಗಾಗಿ 5 ವರ್ಷಗಳ ಮನೆಯಲ್ಲಿ ಗೃಹಿಣಿಯಾಗಿ ಜವಾಬ್ದಾರಿ ನಿರ್ವಹಿಸಿದ ಮಹಿಳೆ 557007.99 ರೂಪಾಯಿ ಪಾವತಿಸುವಂತೆ ಪತಿಗೆ ಚೀನಾ ಕೋರ್ಟ್ ಆದೇಶ ನೀಡಿದೆ.
ಚೀನಾ ಕೋರ್ಟ್ ಈ ರೀತಿಯ ಆದೇಶ ನೀಡುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ವ್ಯಕ್ತವಾಗಿದೆ. ಕೋರ್ಟ್ನ ನಿರ್ಧಾರವನ್ನ ಬಹುತೇಕ ಮಂದಿ ಸ್ವಾಗತಿಸಿದ್ದರೂ ಸಹ ಆಕೆಗೆ ನೀಡಿದ ಪರಿಹಾರದ ಮೊತ್ತ ಕಡಿಮೆಯಾಗಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಪತ್ನಿ ತಾನೊಬ್ಬಳೆ ಮನೆಯನ್ನ ನಿರ್ವಹಿಸೋದ್ರ ಜೊತೆಗೆ ಪುತ್ರನನ್ನ ನೋಡಿಕೊಳ್ಳಲು ಕಷ್ಟವಾಗ್ತಿದೆ ಎಂದು ಆಕ್ಷೇಪ ಎತ್ತಿದ ಹಿನ್ನೆಲೆ ಆಕೆಯ ಪತಿ ವಿಚ್ಚೇದನಕ್ಕಾಗಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಎನ್ನಲಾಗಿದೆ.
ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ಮಹಿಳೆಯ ಪರವಾಗಿ ತೀರ್ಪನ್ನ ನೀಡಿದೆ. ವಿಚ್ಚೇದನದ ವೇಳೆ ಮಗುವನ್ನ ನೋಡಿಕೊಳ್ಳೋದು ಹಾಗೂ ಮನೆಯಲ್ಲಿ ವೃದ್ಧರ ಕಾಳಜಿ ವಹಿಸುವ ಮಹಿಳೆ ಈ ಎಲ್ಲಾ ಕಾರ್ಯಕ್ಕಾಗಿ ಪರಿಹಾರವನ್ನ ಕೇಳಲು ಅರ್ಹಳಾಗಿದ್ದಾಳೆ ಎಂದು ಅಭಿಪ್ರಾಯಪಟ್ಟಿದೆ.