ಹುಂಡೈ ಶೋರೂಂ ಆಚೆ ಯಾವಾಗಲೂ ಇರುತ್ತಿದ್ದ ಬೀದಿ ನಾಯಿಯೊಂದನ್ನು ಸೇಲ್ಸ್ ಮನ್ ಹಾಗೂ ಅಂಬಾಸಡರ್ ಆಗಿ ಅಲ್ಲಿನ ಸಿಬ್ಬಂದಿ ಆಯ್ಕೆ ಮಾಡಿಕೊಂಡ ಘಟನೆ ಬ್ರೆಜಿಲ್‌ನಲ್ಲಿ ಜರುಗಿದೆ.
ಶೋರೂಂ ಸಿಬ್ಬಂದಿಯೊಂದಿಗೆ ಫ್ರೆಂಡ್ ಶಿಪ್ ಮಾಡಿಕೊಂಡಿದ್ದ ಟಕ್ಸನ್ ಪ್ರೈಡ್ ಹೆಸರಿನ ಈ ನಾಯಿ ಇದೀಗ ಅಲ್ಲೇ ಕೆಲಸ ಗಿಟ್ಟಿಸಿಕೊಂಡಿದ್ದಾನೆ. ಈತನಿಗೆ ಐಡಿ ಕಾರ್ಡ್ ಅನ್ನೂ ಸಹ ಕೊಡಮಾಡಲಾಗಿದೆ.
ಹುಂಡೈ ಬ್ರೆಜಿಲ್, ಸಾಮಾಜಿಕ ಜಾಲತಾಣದಲ್ಲಿರುವ ತನ್ನ ಅಧಿಕೃತ ಖಾತೆಯ ಮೂಲಕ ಟಕ್ಸನ್ ನನ್ನು ತನ್ನ ಕುಟುಂಬಕ್ಕೆ ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡಿದೆ. ಟಕ್ಸನ್‌ಗೆ ಶೋರೂಂ ಒಳಗೇ ಒಂದು ಕೆನ್ನೆಲ್ ರೀತಿಯ ಕ್ಯಾಬಿನ್ ವ್ಯವಸ್ಥೆ ಮಾಡಿಕೊಡಲಾಗಿದೆ.
ಫೋಟೋ ಶೇರಿಂಗ್ ಸಾಮಾಜಿಕ ಜಾಲತಾಣದಲ್ಲಿ ತನ್ನದೇ ಖಾತೆಯನ್ನೂ ಹೊಂದಿರುವ ಟಕ್ಸನ್ 28,000 ಫಾಲೋವರ್‌ಗಳನ್ನು ಹೊಂದಿದ್ದು, ದೊಡ್ಡ ಸೆಲೆಬ್ರಿಟಿ ಆಗಿಬಿಟ್ಟಿದ್ದಾನೆ.
https://www.instagram.com/p/CDTmfx1HXsf/?utm_source=ig_embed
https://www.instagram.com/p/CCgLIasAQkf/?utm_source=ig_embed
https://www.instagram.com/p/CCgPjFOgsGQ/?utm_source=ig_embed
https://www.instagram.com/p/CDcvJIsnXAg/?utm_source=ig_embed