
ನಾಯಿಗಳು ತಮ್ಮ ಸ್ನೇಹಮಯ ವರ್ತನೆಗಳಿಂದ ಜನಮನ ಗೆಲ್ಲುವ ಅನೇಕ ನಿದರ್ಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ. ಇಲ್ಲೊಂದು ನಾಯಿ ತನ್ನ ಮಿತ್ರನಾದ ಬೆಕ್ಕಿನೊಂದಿಗೆ ಆಹಾರ ಹಂಚಿಕೊಳ್ಳುತ್ತಿರುವ ವಿಡಿಯೋವೊಂದು ಆನ್ಲೈನ್‌ನಲ್ಲಿ ಕಾಣಿಸಿಕೊಂಡಿದೆ.
ಈ ವಿಡಿಯೋವನ್ನು ಚೀನಾದ ಶಾಂಡಾಂಗ್‌ನ ವೆಯ್‌ಫಾಂಗ್‌ನಲ್ಲಿ ಸೆರೆ ಹಿಡಿಯಲಾಗಿದೆ. ನಾಯಿಯ ಮಾಲೀಕ ಫು, ತನ್ನ ನಾಯಿ ಆಹಾರವನ್ನು ಹಂಚಿಕೊಳ್ಳುವ ಭರದಲ್ಲಿ ಬೆಕ್ಕಿನೊಂದಿಗೆ ಜಗಳವಾಡಲು ನೋಡುತ್ತಿದೆ ಎಂದುಕೊಂಡಿದ್ದರಂತೆ.
“ಅಪ್ಪಿತಪ್ಪಿ ಈ ಕ್ಷಣವನ್ನು ನಾನು ಸೆರೆಹಿಡಿದೆ. ನಮ್ಮ ಮನೆಯ ಹೊರಗಿರುವ ಆಂಗಳದಲ್ಲಿ ಈ ಘಟನೆ ಜರುಗಿದೆ. ಮೆಟ್ಟಿಲುಗಳ ಮೇಲೆ ನಿಂತುಕೊಂಡ ನನ್ನ ನಾಯಿ ಬೊಗಳುವುದನ್ನು ಕೇಳಿಸಿಕೊಂಡಾಗ ನಾನು ಅಲ್ಲೇ ಕೆಳಗೆ ಕೆಲಸ ಮಾಡುತ್ತಿದ್ದೆ. ನಾನು ನೋಡುತ್ತಿದ್ದಂತೆಯೇ ನಾಯಿಯು ತನ್ನ ಕೆನಲ್ ಒಳಗೆ ಹೋಗಿ ತನ್ನ ಬನ್ ಅನ್ನು ಬಾಯಿಯಲ್ಲಿ ಕಚ್ಚಿಕೊಂಡು ಬಂದು, ಮತ್ತೊಮ್ಮೆ ಬೊಗಳಿದೆ. ಆವಾಗ ಬೆಕ್ಕು ಅಲ್ಲೇ ಮೆಟ್ಟಿಲುಗಳ ಮೇಲೆ ನಿಂತಿದ್ದು ನನ್ನ ಗಮನಕ್ಕೆ ಬಂದಿದೆ” ಎಂದಿದ್ದಾರೆ.
ಬೆಕ್ಕನ್ನು ಕರೆದ ಬಳಿಕ, ಆ ಬನ್ ಬೆಕ್ಕಿಗೆ ಅಂತ ಇಟ್ಟ ನಾಯಿ, ಅಲ್ಲಿಂದ ಹಿಂದಕ್ಕೆ ಒಂದೆರಡು ಹೆಜ್ಜೆ ಇಟ್ಟಿದೆ.
https://www.facebook.com/PeoplesDaily/videos/301437897591727