ಮನುಷ್ಯನಿಗೆ ಶ್ವಾನ ಒಂದೊಳ್ಳೆ ಸ್ನೇಹಿತ ಎಂದು ಕರೆದ್ರೆ ತಪ್ಪಾಗಲಿಕ್ಕಿಲ್ಲ. ಒಮ್ಮೆ ಶ್ವಾನಗಳು ನಮ್ಮ ಜೀವನಕ್ಕೆ ಎಂಟ್ರಿ ಕೊಟ್ಟವು ಅಂದರೆ ಮುಗೀತು. ತಮ್ಮ ಜೀವಿತಾವಧಿಯ ತುಂಬೆಲ್ಲ ಸಾಲದಷ್ಟು ಪ್ರೀತಿಯನ್ನ ಧಾರೆಯೆರೆದು ಬಿಡುತ್ತವೆ. ಇದೇ ಮಾತಿಗೆ ಉದಾಹರಣೆ ಎಂಬಂತೆ ಶ್ವಾನವೊಂದು ನೂತನ ವಧುವರರ ನೃತ್ಯದಲ್ಲಿ ತಾನೂ ಭಾಗಿಯಾಗಿದ್ದು, ಈ ವಿಡಿಯೋ ನೆಟ್ಟಿಗರ ಮನ ಕದಿಯುವಲ್ಲಿ ಯಶಸ್ವಿಯಾಗಿದೆ.
ನೂತನ ವಧು ವರರು ಮದುವೆ ಕಾರ್ಯಕ್ರಮದಂದು ನೃತ್ಯ ಮಾಡುತ್ತಿದ್ದರೆ ಅಲ್ಲೇ ಇದ್ದ ಶ್ವಾನ ಇವರ ಬಳಿಗೆ ಬಂದು ತನ್ನ ಎರಡು ಕಾಲುಗಳನ್ನ ಎತ್ತಿ ನೃತ್ಯ ಮಾಡಿದೆ.
ಈ ವಿಡಿಯೋವನ್ನ ರೆಡಿಟ್ನಲ್ಲಿ ಹಂಚಿಕೊಳ್ಳಲಾಗಿದ್ದು ‘ ಹೇ..! ನನ್ನನ್ನ ಮರೆಯಬೇಡಿ’ ಎಂದು ಶೀರ್ಷಿಕೆ ನೀಡಲಾಗಿದೆ. ಈ ಮುದ್ದಾದ ವಿಡಿಯೋ ಸೋಶಿಯಲ್ ಮೀಡಿಯಾದ ಇತರೆ ವೇದಿಕೆಗಳಲ್ಲೂ ವೈರಲ್ ಆಗಿದೆ.