ಯುರೋಪ್ ರಾಷ್ಟ್ರಗಳಲ್ಲಿ ಕರೊನಾದ ಎರಡನೇ ಅಲೆ ಶುರುವಾಗಿದೆ. ಹೀಗಾಗಿ ಫ್ರಾನ್ಸ್ ನಲ್ಲಿ ಎರಡನೇ ಹಂತದ ಲಾಕ್ಡೌನ್ ಜಾರಿ ಮಾಡಲಾಗಿದೆ. ಲಾಕ್ಡೌನ್ ಆದೇಶಕ್ಕೂ ಮುನ್ನ ಸಂಚಾರ ದಟ್ಟಣೆ ವಿಪರೀತವಾಗಿ ಹೊಂದಿದ್ದ ಫ್ರಾನ್ಸ್ ಶುಕ್ರವಾರ ಬೆಳಗ್ಗೆ ಅನ್ನೋವಷ್ಟರಲ್ಲಿ ಬಿಕೋ ಎನ್ನುತ್ತಿದೆ.
ಗುರುವಾರ ರಾತ್ರಿ ಫ್ರಾನ್ಸ್ನ ರಸ್ತೆಯೊಂದರಲ್ಲಿ 700 ಕಿಲೋಮೀಟರ್ವರೆಗೆ ಟ್ರಾಫಿಕ್ ಜಾಮ್ ಉಂಟಾಗಿದ್ದ ಫೋಟೋ ಸೋಶಿಯಲ್ ಮೀಡಿಯಾ ತುಂಬೆಲ್ಲ ಹರಿದಾಡಿತ್ತು. ಆದರೆ ಈಗ ವೀಕೆಂಡ್ ಸಮಯದಲ್ಲಿ ಜನರಿಂದ ಗಿಜಿಗುಡುತ್ತಿದ್ದ ಫ್ರಾನ್ಸ್ ರಾಜಧಾನಿಯ ಅನೇಕ ಬೀದಿಗಳು ಜನರಿಲ್ಲದೇ ಖಾಲಿ ಹೊಡೆಯುತ್ತಿವೆ,
ಕರೊನಾ ವೈರಸ್ ನಿಯಂತ್ರಣಕ್ಕಾಗಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವಲ್, 4 ವಾರಗಳ ಕಾಲ ಲಾಕ್ಡೌನ್ ಆದೇಶ ಜಾರಿ ಮಾಡಿದ್ದಾರೆ. ಡಿಸೆಂಬರ್ 1ರವರೆಗೆ ಲಾಕ್ಡೌನ್ ಜಾರಿಯಲ್ಲಿ ಇರಲಿದೆ.