ರಷ್ಯಾ: ಪಾರ್ಶ್ವವಾಯುಕ್ಕೆ ತುತ್ತಾಗಿ ತಮ್ಮ ಎರಡೂ ಕಾಲು ಸ್ವಾಧೀನ ಕಳೆದುಕೊಂಡಿದ್ದರೂ ಇನ್ನೊಬ್ಬರ ಸಹಾಯಕ್ಕಾಗಿ ನೀರಿಗೆ ಧುಮುಕಿದ ವ್ಯಕ್ತಿಯ ಕಾರ್ಯಕ್ಕೆ ರಷ್ಯಾದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ನೆಟ್ಟಿಗರು ಅವರನ್ನು ನಿಜವಾದ ಹಿರೋ ಎಂದು ಬಣ್ಣಿಸಿದ್ದಾರೆ.
ರಷ್ಯಾದ ಅನ್ಪಾ ನಗರದಲ್ಲಿ ನಿಕಿತಾ ವಾನ್ಕೋವ್ ಎಂಬ ಅಂಗವಿಕಲ ವ್ಯಕ್ತಿ ನದಿಯೊಂದರ ಪಕ್ಕ ಡಾಕ್ಯುಮೆಂಟರಿ ಶೂಟಿಂಗ್ ನಡೆಸಿದ್ದರು. ಆ ಸಂದರ್ಭದಲ್ಲಿ ಅದೇ ಸ್ಥಳದಲ್ಲಿ ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯ ರಕ್ಷಣೆಗೆ ಇನ್ನಿಬ್ಬರು ಕಷ್ಟಪಡುತ್ತಿದ್ದರು.
ಅದನ್ನು ನೋಡಿದ ವಾನ್ಕೋವ್ ತಮ್ಮ ವೀಲ್ ಚೇರ್ ನಿಂದ ಇಳಿದು ನೇರವಾಗಿ ನೀರಿಗೆ ಜಿಗಿದು ಮುಳುಗುತ್ತಿದ್ದ ವ್ಯಕ್ತಿಯನ್ನು ಸುಲಭವಾಗಿ ದಡಕ್ಕೆ ಎಳೆ ತರುತ್ತಾರೆ. ಈ ಅಪರೂಪದ ಸಂದರ್ಭವನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಿಕಿತಾ ವಾನ್ಕೋವ್ ಪರವಾನಗಿ ಪಡೆದ ಪ್ಯಾರಾ ಡೈವರ್ ಆಗಿದ್ದಾರೆ. ಅವರು 13 ವರ್ಷದ ಹಿಂದೆ ಗಾಯಗೊಂಡಿದ್ದರು. ನಂತರ ಅವರು ಚೇತರಿಸಿಕೊಂಡು ನಿರಂತರ ಪ್ರಯತ್ನದಿಂದ ಈಜಲು ಅರ್ಹತೆ ಪಡೆದಿದ್ದರು. ಅವರ ಈ ಸಾಧನೆಯ ಕುರಿತು ಡಾಕ್ಯುಮೆಂಟರಿ ನಡೆಸಲಾಗಿತ್ತು.