ಸಮುದ್ರದ ನಡುವೆ ಇರುವ ದ್ವೀಪವೊಂದರ ಪ್ರಶಾಂತ ವಾತಾವರಣದಲ್ಲಿ ಸಮುದ್ರ ನೋಡುತ್ತ ಕಾಲ ಕಳೆಯಬೇಕು ಎಂಬ ಕನಸು ಎಷ್ಟು ಜನರಿಗಿಲ್ಲ ಹೇಳಿ. ಆ ಕನಸು ನನಸಾಗಬೇಕಿದ್ದರೆ ಇಲ್ಲೊಂದು ಅವಕಾಶವಿದೆ ನೋಡಿ. ಅದೇನು ಹೋಟೆಲ್ ವಾಸ್ತವ್ಯವಲ್ಲ. ಕಾಯಂ ಮನೆಯೇ ಸಿಗುತ್ತದೆ.
ಹೌದು, ಐಸ್ಲ್ಯಾಂಡ್ ದ್ವೀಪ ಗ್ರಾಮವೊಂದು ಹೊಸ ಪ್ರಜೆಗಳಿಗಾಗಿ ಹುಡುಕಾಟ ನಡೆಸಿದೆ. ಇಲ್ಲಿ ಬಂದು ಉಳಿಯಿರಿ ಎಂದು ಅಲ್ಲಿನ ಆಡಳಿತ ಕರೆಯುತ್ತಿದೆ.
ದ ಐಸ್ಲೆ ಆಫ್ ರಮ್ ನಲ್ಲಿ 32 ಜನರು 6 ಮಕ್ಕಳಿದ್ದಾರೆ. ಅವರು, ಸ್ಕಾಟಿಶ್ ಸರ್ಕಾರದ ಸಹಾಯದಲ್ಲಿ ಐಸ್ಲ್ಯಾಂಡ್ ಗ್ರಾಮೀಣ ವಸತಿ ನಿಧಿಯಿಂದ ತಲಾ 2 ಬೆಡ್ ರೂಂಗಳಿರುವ ಇನ್ನಷ್ಟು ಮನೆಗಳನ್ನು ಕಟ್ಟಲಾಗುತ್ತಿದೆ. ಭೂಮಿಯ ಸಾಮೂಹಿಕ ಮಾಲೀಕತ್ವ ಇರುತ್ತದೆ.
ಇಲ್ಲಿ ಬಂದು ಉಳಿಯುವ ಹೊರ ಊರಿನ ವ್ಯಕ್ತಿ ಮತ್ತು ಕುಟುಂಬಗಳು ಬೇಕಿವೆ ಎಂದು ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಗ್ರಾಮದಲ್ಲಿ ಒಂದು ಅಂಗನವಾಡಿ ಹಾಗೂ ಒಂದು ಪ್ರಾಥಮಿಕ ಶಾಲೆ ಇದೆ. ಅಂಗನವಾಡಿಗೆ ಕೇವಲ ಒಬ್ಬ ಮಗು ಹಾಗೂ ಪ್ರಾಥಮಿಕ ಶಾಲೆಯಲ್ಲಿ ಇಬ್ಬರಿದ್ದಾರೆ. ನಾವು ಶಾಲೆ ಪ್ರಾರಂಭ ಮಾಡಲಿದ್ದು, ಅದಕ್ಕೆ ಮಕ್ಕಳು ಬೇಕಾಗಿದ್ದಾರೆ. ಐಸ್ಲ್ಯಾಂಡ್ ಜೀವನ ಕ್ರಮಕ್ಕೆ ಹೊಂದಿಕೊಳ್ಳುವ ಕುಟುಂಬಗಳು ಇಲ್ಲಿ ಬಂದರೆ ಇಲ್ಲಿ ಆಹಾರ ತಯಾರಿಕೆ, ಮಕ್ಕಳ ಪೋಷಣೆ, ಮೀನು ಕೃಷಿ ಸೇರಿ ಹಲವು ಉದ್ಯೋಗಾವಕಾಶಗಳಿವೆ ಎಂದು ತಿಳಿಸಲಾಗಿದೆ.