alex Certify ಆಸ್ಪತ್ರೆಯಲ್ಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೋವಿಡ್-19 ಸೋಂಕಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಪತ್ರೆಯಲ್ಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೋವಿಡ್-19 ಸೋಂಕಿತ

ಈ ನಾವೆಲ್ ಕೊರೊನಾ ವೈರಸ್ ಜಗತ್ತಿನೆಲ್ಲೆಡೆ ಭಯ ಹಾಗೂ ನಕಾರಾತ್ಮಕತೆಯ ವಾತಾವರಣವನ್ನು ಸೃಷ್ಟಿ ಮಾಡಿದೆ. ಅನೇಕ ಕುಟುಂಬಗಳ ಜೀವನೋಪಾಯವನ್ನೇ ಕಸಿದಿರುವ ಕೊರೊನಾ ವೈರಸ್‌, ಆಶಾಭಾವನೆಯೇ ಇಲ್ಲದಂತೆ ಮಾಡಿದೆ.

ಟೆಕ್ಸಾಸ್ ‌ನ ಸ್ಯಾನ್ ಆಂಟೋನಿಯೋದ ಕಾರ್ಲೋಸ್ ಮುನಿಝ್ ಹೆಸರಿನ ವ್ಯಕ್ತಿಯೊಬ್ಬರು ಕೋವಿಡ್-19 ಸೋಂಕಿನ ವಿರುದ್ಧ ಹೋರಾಡುತ್ತಿದ್ದಾರೆ. ಇದೇ ವೇಳೆ ತನ್ನ ಪ್ರೇಯಸಿ ಗ್ರೇಸ್ ‌ರೊಂದಿಗೆ ಮುನಿಝ್‌ ಆಸ್ಪತ್ರೆಯಲ್ಲೇ ಮದುವೆಯಾಗಿದ್ದಾರೆ.

ಕಾರ್ಲೋಸ್ ‌ಗೆ ಮದುವೆ ಫಿಕ್ಸ್ ಆದ ಬೆನ್ನಿಗೇ ಆತನಿಗೆ ಕೊರೊನಾ ಪರೀಕ್ಷೆ ವೇಳೆ ಪಾಸಿಟಿವ್‌ ಎಂದು ಕಂಡುಬಂದಿದೆ. ಅವರನ್ನು ಇಲ್ಲಿನ ಮೆಥಾಡಿಸ್ಟ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದಿನಗಳು ಕಳೆದಂತೆ ಆತನ ಆರೋಗ್ಯ ಕ್ಷೀಣಿಸಿ ಆತನನ್ನು ಐಸಿಯುಗೆ ದಾಖಲು ಮಾಡಲಾಗಿತ್ತು. ಈ ಕಾರಣದಿಂದ ಮದುವೆ ಸಮಾರಂಭ ಆಯೋಜಿಸಿಕೊಳ್ಳಲು ಸಾಧ್ಯವಾಗದೇ ಇದ್ದ ಕಾರಣ ಇಬ್ಬರಿಗೂ ಒಂದು ಸುಂದರ ಸಮಾರಂಭವೊಂದನ್ನು ಆಯೋಜಿಸಿ ಆಸ್ಪತ್ರೆಯಲ್ಲೇ ಮದುವೆ ಮಾಡಿಸಿದ್ದಾರೆ ಅಲ್ಲಿನ ಸಿಬ್ಬಂದಿ.

https://www.facebook.com/kens5/videos/1220024538355273

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...