ಪಾಕಿಸ್ತಾನ ಜಮೈತ್ ಉಲೆಮಾ ಇಸ್ಲಾಂನ ಮುಖಂಡ ಹಾಗೂ ಬಲೂಚಿಸ್ತಾನ ಪ್ರತಿನಿಧಿ ಮೌಲಾನಾ ಸಲಾಹುದ್ದೀನ್ ಅಯುಬಿ 14 ವರ್ಷದ ಅಪ್ರಾಪ್ತೆಯನ್ನ ವಿವಾಹವಾದ ವಿಚಿತ್ರ ಘಟನೆ ವರದಿಯಾಗಿದೆ. ಪಾಕಿಸ್ತಾನ ಪೊಲೀಸರು ಈ ವಿವಾಹ ಸಂಬಂಧ ತನಿಖೆ ಕೈಗೊಂಡಿದ್ದಾರೆ.
ಮಹಿಳಾ ಅಭಿವೃದ್ಧಿ ಸಂಘಟನೆಯೊಂದು ಸಲ್ಲಿಸಿದ ದೂರನ್ನ ಆಧರಿಸಿ ಪೊಲೀಸರು ತನಿಖೆ ಶುರುವಿಟ್ಟಿದ್ದಾರೆ. ವಿವಾಹವಾದ ಬಾಲಕಿ ಜುಘೂರ್ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದಳು ಎಂದು ತಿಳಿದುಬಂದಿದೆ. ಈಕೆ 2006 ಡಿಸೆಂಬರ್ 28ರಂದು ಜನಿಸಿದ್ದಾಳೆ. ಇದರರ್ಥ ಈಕೆ ಇನ್ನೂ ವಿವಾಹ ವಯಸ್ಸಿಗೆ ಬಂದಿಲ್ಲ.
ಆದರೆ ಮೌಲಾನಾ 50 ವರ್ಷ ದಾಟಿದವರಾಗಿದ್ದಾರೆ. ಇನ್ನು ಈ ಸಂಬಂಧ ತನಿಖೆ ಶುರು ಮಾಡಿದ್ದ ಪೊಲೀಸರು ಬಾಲಕಿಯ ಮನೆಯನ್ನ ಸಂಪರ್ಕಿಸಿದ್ದಾರೆ. ಆದರೆ ಬಾಲಕಿಯ ತಂದೆ ಯಾವುದೇ ಮಾಹಿತಿಯನ್ನ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಪಾಕಿಸ್ತಾನದ ಸಂಸದ ತನಗಿಂತ ನಾಲ್ಕು ಪಟ್ಟು ಕಿರಿಯ ವಯಸ್ಸಿನ ಅಪ್ರಾಪ್ತೆಯೊಂದಿಗೆ ವಿವಾಹವಾಗುವ ಮೂಲಕ ಕಾನೂನು ಉಲ್ಲಂಘಿಸೋದ್ರ ಜೊತೆಗೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.