2020ರ ವರ್ಷ ಕೊನೆಯಾಗಿದೆ. ಕೊರೊನಾದಿಂದಾಗಿ ಈ ವರ್ಷ ಬಹಳಷ್ಟು ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ಕೊರೊನಾ ನಿಯಂತ್ರಣ ಮಾಡಬೇಕೆಂಬ ಕಾರಣಕ್ಕೆ ಮಾಸ್ಕ್ಗಳನ್ನ ಕಡ್ಡಾಯಗೊಳಿಸಲಾಗಿದೆ. ಮಾಸ್ಕ್ ಧರಿಸದೇ ಇದ್ದವರಿಗೆ ದಂಡ ವಿಧಿಸುವ ಮೂಲಕ ಎಚ್ಚರಿಕೆ ನೀಡಲಾಗ್ತಿದೆ.
ಆದರೆ ಪಾಕಿಸ್ತಾನದಲ್ಲಿ ಮಾತ್ರ ಓರ್ವ ವ್ಯಕ್ತಿ 2021ರ ಹೊಸ ವರ್ಷಾಚರಣೆ ಮುಖವಾಡ ಹಾಕಿಕೊಂಡಿದ್ದರೂ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾನೆ. ಅರೆ..! ಮುಖವಾಡ ಹಾಕಿಕೊಂಡರೂ ದಂಡ ವಿಧಿಸೋದು ಯಾಕೆ ಎಂದು ನೀವು ಯೋಚಿಸುತ್ತಿರಬಹುದು. ಇದಕ್ಕೆ ಕಾರಣ ಆತ ಹಾಕಿದ್ದು ಆಟಿಕೆಯ ಮುಖವಾಡ.
2020 ಕೊನೆಗೊಳ್ಳುವ ದಿನದಂದು ತಮಾಷೆ ಮಾಡೋಕೆ ಅಂತಾ ತೋಳದ ಚಿತ್ರವಿರುವ ಮುಖವಾಡ ಧರಿಸಲು ಹೋದ ವ್ಯಕ್ತಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗೆ ಅದೇ ತೋಳದ ಮುಖವಾಡ ಇರುವ ಫೋಟೋ ಹಾಕಿ ಆತನ ಕೈಗೆ ಕೋಳ ತೊಡಿಸಿದ ಪೊಲೀಸರು ಫೋಟೋ ತೆಗೆದುಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಪೊಲೀಸರ ಕ್ರಮಕ್ಕೆ ಸದ್ಯ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಕೆಲವರು ಪೊಲೀಸರ ಕ್ರಮವನ್ನ ಪ್ರಶಂಸಿದ್ರೆ ಇನ್ನೂ ಹಲವರು ಆತ ಕನಿಷ್ಟ ಅಷ್ಟಾದರೂ ಮುಖಕ್ಕೆ ಕಟ್ಟಿಕೊಂಡಿದ್ದನಲ್ವಾ ಅಂತಾ ಪ್ರಶ್ನೆ ಹಾಕಿದ್ದಾರೆ.
https://twitter.com/melika_sa/status/1344904147863220224