ಇಸ್ಲಾಮಾಬಾದ್: ಮದುವೆ ಸಮಾರಂಭಗಳಲ್ಲಿ, ಬಟ್ಟೆ, ಪಾತ್ರೆ ಅಥವಾ ಇತರ ಬಳಕೆಯ ವಸ್ತುಗಳನ್ನು ವಧು- ವರರಿಗೆ ನೀಡುವ ಸಂಪ್ರದಾಯ ಎಲ್ಲೆಡೆ ಇದೆ. ಆದರೆ, ಇಲ್ಲೊಬ್ಬ ವರನಿಗೆ ಎಕೆ-47 ಗನ್ ಗಿಫ್ಟ್ ನೀಡುವ ವಿಡಿಯೋ ವೈರಲ್ ಆಗಿದೆ.
30 ಸೆಕೆಂಡ್ ಗಳ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ” ಕಲಾಶ್ನಿಕೋವ್ ರೈಫಲ್ ಮದುಮಗನಿಗೆ ಕೊಡುಗೆಯಾಗಿ” ಎಂದು ಬರೆಯಲಾಗಿದೆ. ಮಹಿಳೆಯೊಬ್ಬಳು ವರನಿಗೆ ರೈಫಲ್ ನೀಡುತ್ತಿದ್ದು, ಅದನ್ನು ಸ್ವೀಕರಿಸುವ ವರ ಅಥವಾ ವಧುವಿನ ಮುಖದಲ್ಲಿ ಯಾವುದೇ ಆತಂಕ ಕಾಣುವುದಿಲ್ಲ.
ಮದುವೆ ಪಾಕಿಸ್ತಾನದಲ್ಲಿ ನಡೆದಿದ್ದಾಗಿದ್ದು, ವಿಡಿಯೋವನ್ನು 188 ಸಾವಿರ ಜನ ವೀಕ್ಷಿಸಿದ್ದಾರೆ. 2.5 ಸಾವಿರ ಜನ ಲೈಕ್ ಮಾಡಿದ್ದಾರೆ.
https://twitter.com/UN_PrEdiTAble/status/1331859105342885892?ref_src=twsrc%5Etfw%7Ctwcamp%5Etweetembed%7Ctwterm%5E1331859105342885892%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fpakistani-groom-receives-ak-47-rifle-as-gift-on-wedding-day-video-goes-viral-3122732.html