
ಕ್ರಿಕೆಟ್ ಪ್ರೇಮಿಯೊಬ್ಬ ಪಾಕಿಸ್ತಾನದ ಕ್ರಿಕೆಟಿಗ ಹ್ಯಾರಿಸ್ ರೌಫ್ ಸಿಕ್ಕಿದ್ದೇ ತಡ ಕಿಸೆಯಿಂದ ಮೊಬೈಲ್ ತೆಗೆದು ಸೆಲ್ಫಿ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು. ಮನೆಗೆ ಬಂದ ಬಳಿಕ ಅನುಮಾನಗೊಂಡ ಅಭಿಮಾನಿ, ಇಂಗ್ಲೆಂಡ್ -ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದರೂ ಹ್ಯಾರಿಸ್ ಏಕೆ ಭಾಗಿಯಾಗಿಲ್ಲ ಎಂದು ಯೋಚಿಸಿದ್ದಾನೆ. ಇದನ್ನೇ ಗೂಗಲ್ ನಲ್ಲಿ ಹುಡುಕಿದ ಅಭಿಮಾನಿಗೆ ಶಾಕ್ ಕಾದಿತ್ತು.
ಕ್ರಿಕೆಟಿಗ ಹ್ಯಾರಿಸ್ ಗೆ ಕೊರೊನಾ ಸೋಂಕು ತಗುಲಿದ್ದರಿಂದ ಪಂದ್ಯದಲ್ಲಿ ಪಾಲ್ಗೊಂಡಿಲ್ಲ. ಬದಲಿಗೆ ಹೋಮ್ ಐಸೋಲೇಶನ್ ನಲ್ಲಿರಬೇಕು ಎಂದು ವೈದ್ಯರು ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಕಟ್ಟುನಿಟ್ಟಿನ ಸೂಚನೆ ನೀಡಿತ್ತು.
ಇದನ್ನು ಕಂಡ ಅಭಿಮಾನಿ ಹೌಹಾರಿದ್ದು, ಆರಾಧ್ಯದೈವದಂತಿದ್ದ ಹ್ಯಾರಿಸ್ ತನ್ನ ಪಾಲಿಗೆ ಕಂಟಕವಾಗಿ ಪರಿಣಮಿಸಿಬಿಟ್ಟನೆ ? ನೆಚ್ಚಿನ ಕ್ರಿಕೆಟಿಗನೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಸಮಯವು ಅವಿಸ್ಮರಣೀಯ ಎನಿಸಬೇಕು. ಆದರೆ, ಈ ಅಭಿಮಾನಿಯ ಪಾಲಿಗೆ ದುರಂತ ಎನಿಸಿಬಿಟ್ಟಿದೆ. ಸೆಲ್ಫಿಯನ್ನು ಜಾಲತಾಣದಲ್ಲಿ ಹಂಚಿಕೊಂಡಿರುವ ಅಭಿಮಾನಿ, ಈ ವಿಷಯವನ್ನೂ ಹಂಚಿಕೊಂಡಿದ್ದಾನೆ. ಇದಕ್ಕೆ ಗಮ್ಮತ್ತಿನ ಕಮೆಂಟ್ ಗಳೂ ಬಂದಿವೆ.

https://www.facebook.com/muhammadshahab.ghauri/posts/1624666731034587
https://www.facebook.com/DennisDoesCricket/photos/a.413425628802512/1994752820669777/?type=3
https://www.facebook.com/muhammadshahab.ghauri/posts/1624681174366476