
ಈ ಎಲ್ಲದರ ಜೊತೆ ಸೋಶಿಯಲ್ ಮೀಡಿಯಾದಲ್ಲಿ ಕೊರೊನಾ ಸಂಬಂಧಿ ಸಾಕಷ್ಟು ಮಾನವೀಯ ಕಾರ್ಯಗಳು ನಡೆಯುತ್ತಿದೆ. ಕೊರೊನಾ ಸಂಕಷ್ಟದಲ್ಲಿರುವ ಅನೇಕರಿಗೆ ಸಾಮಾಜಿಕ ಜಾಲತಾಣದ ನೆರವಿನಿಂದ ಸಹಾಯ ಸಿಗ್ತಿದೆ. ಇದೀಗ ನೆರೆಯ ಪಾಕಿಸ್ತಾನಿಗಳೂ ಈ ಕೆಲಸಕ್ಕೆ ಕೈ ಜೋಡಿಸಿದ್ದಾರೆ.
ಪಾಕಿಸ್ತಾನದ ಅಬ್ದುಲ್ ಸತ್ತರ್ ಎದಿ ನಿರ್ಮಾಣ ಮಾಡಿರುವ ಎದಿ ಫೌಂಡೇಶನ್ ವತಿಯಿಂದ ಪ್ರಧಾನಿ ಮೋದಿಗೆ ಪತ್ರ ಬರೆಯಲಾಗಿದ್ದು, ಡೆಡ್ಲಿ ವೈರಸ್ ವಿರುದ್ಧದ ಭಾರತದ ಹೋರಾಟಕ್ಕೆ 50 ಆಂಬುಲೆನ್ಸ್ಗಳನ್ನ ಕಳಿಸಲು ಇಚ್ಛಿಸುತ್ತೇವೆ ಎಂದು ಹೇಳಿದ್ದಾರೆ.
ಭಾರತದಲ್ಲಿರುವ ಗಂಭೀರ ಪರಿಸ್ಥಿತಿಯ ಬಗ್ಗೆ ನಮ್ಮ ಫೌಂಡೇಶನ್ಗೆ ಅರಿವಿದೆ. ನಾವು ಈ ಸಂಕಷ್ಟದ ಸಮಯದಲ್ಲಿ ನಿಮಗೆ ನೆರವಾಗಲು ಇಚ್ಛಿಸುತ್ತೇವೆ, ನಮ್ಮ ತಂಡದಲ್ಲಿ ವೈದ್ಯಕೀಯ ತಂತ್ರಜ್ಞಾನಗಳು, ಆಸ್ಪತ್ರೆ ಸಿಬ್ಬಂದಿ, ಚಾಲಕರು ಸೇರಿದಂತೆ ಇತರೆ ಸಿಬ್ಬಂದಿ ಇದ್ದಾರೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ಇದಕ್ಕೆ ಪ್ರಧಾನಿ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ ಅನ್ನೋದಕ್ಕೆ ಎಲ್ಲರೂ ಕಾಯ್ತಿದ್ದಾರೆ. ಈ ನಡುವೆಯೇ ಟ್ವಿಟರ್ನಲ್ಲಿ Pakistan stands with India ಎಂಬ ಹ್ಯಾಶ್ಟ್ಯಾಗ್ ವೈರಲ್ ಆಗಿದೆ. ಪಾಕಿಸ್ತಾನದಲ್ಲಿ ಈ ಹ್ಯಾಶ್ಟ್ಯಾಗ್ ಟಾಪ್ ಟ್ರೆಂಡಿಂಗ್ನಲ್ಲಿದೆ.




