ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕೊರೊನಾ ವೈರಸ್ನ ಬಗ್ಗೆ ಜಾಸ್ತಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಕೊರೊನಾ ಸಂಕಷ್ಟದಿಂದ ಪಾರು ಮಾಡೋದನ್ನ ದೇವರಿಗೆ ಕೈಗೆ ಬಿಟ್ಟಿರುವ ಅವರು ಕೊರೊನಾ ಲಸಿಕೆ ಖರೀದಿ ಮಾಡದೇ ಇರುವ ನಿರ್ಧಾರಕ್ಕೆ ಬಂದಿದ್ದಾರೆ. ಪಾಕಿಸ್ತಾನ ಸರ್ಕಾರ ಇಲ್ಲಿಯವರೆಗೆ ಕೊರೊನಾ ಲಸಿಕೆಗಾಗಿ ನಯಾಪೈಸೆ ಖರ್ಚು ಮಾಡಿಲ್ಲವಂತೆ..! ವಿವಿಧ ದೇಶಗಳು ಕಳುಹಿಸಿದ ಉಚಿತ ಲಸಿಕೆಗಳಿಂದಲೇ ಕೊರೊನಾ ವೈರಸ್ನ್ನು ಹೊಡೆದೋಡಿಸುವ ಪ್ರಯತ್ನ ಮಾಡುತ್ತಿದೆ.
ನ್ಯಾಷನಲ್ ಹೆಲ್ತ್ ಸರ್ವೀಸ್ ಕಾರ್ಯದರ್ಶಿ ಅಮೀರ್ ಅಷ್ರಫ್ ಖ್ವಾಜಾ ಈ ವಿಚಾರವಾಗಿ ಮಾತನಾಡಿ, ಪಾಕಿಸ್ತಾನ ಸರ್ಕಾರ ಕೊರೊನಾ ಲಸಿಕೆ ಖರೀದಿ ಮಾಡುವ ಬಗ್ಗೆ ಈವರೆಗೆ ಯಾವುದೇ ಯೋಚನೆಯನ್ನ ಮಾಡಿಲ್ಲ. ಮಿತ್ರ ದೇಶಗಳಿಂದ ಉಡುಗೊರೆ ರೂಪದಲ್ಲಿ ಸಿಗುತ್ತಿರುವ ಲಸಿಕೆಯನ್ನೇ ದೇಶದಲ್ಲಿ ಬಳಕೆ ಮಾಡಲಾಗ್ತಿದೆ ಎಂದು ಹೇಳಿದ್ದಾರೆ.
ನ್ಯಾಷನಲ್ ಹೆಲ್ತ್ ಸರ್ವೀಸ್ನ ಮೇಜರ್ ಜನರಲ್ ಆಮೀರ್ ಅಮೇರ್ ಇಕ್ರಂ ಕೂಡ ಈ ವಿಚಾರವಾಗಿ ಮಾತನಾಡಿದ್ದು, ಚೀನಾ ನಿರ್ಮಿತ ಕೊರೊನಾ ಲಸಿಕೆಯ ಒಂದು ಡೋಸ್ನ ಬೆಲೆ 13 ಡಾಲರ್ ಇದೆ. ಹೀಗಾಗಿ ನಾವು ಸದ್ಯಕ್ಕೆ ಕೊರೊನಾ ಲಸಿಕೆ ಖರೀದಿ ಮಾಡುವ ಪ್ಲಾನ್ನಲ್ಲಿ ಇಲ್ಲ. ಪಾಕಿಸ್ತಾನ ಕೊರೊನಾ ಲಸಿಕೆಗಾಗಿ ಅಂತಾರಾಷ್ಟ್ರೀಯ ಲಸಿಕೆ ಕೊಡುಗೆದಾರ ದೇಶಗಳ ಭರವಸೆಯ ಮೇಲೆ ನಿಂತಿದೆ ಎಂದು ಹೇಳಿದ್ರು.
ಪಾಕಿಸ್ತಾನಕ್ಕೆ ಲಸಿಕೆ ಹಾಗೂ ರೋಗನಿರೋಧಕ ಜಾಗತಿಕ ಒಕ್ಕೂಟದ ನೆರವಿನಿಂದ ಭಾರತ, ಆಕ್ಸ್ಫರ್ಡ್ – ಆಸ್ಟ್ರೆಜೆನೆಕಾ ನಿರ್ಮಾಣದ ಕೊರೊನಾ ಲಸಿಕೆಯನ್ನ ಉಚಿತವಾಗಿ ನೀಡಿದೆ. ಇದರಿಂದ ಪಾಕಿಸ್ತಾನದ ಒಟ್ಟು ಜನಸಂಖ್ಯೆಯ 20 ಪ್ರತಿಶತ ಜನರಿಗೆ ಲಸಿಕೆ ಸಿಗಲಿದೆ.