
ಇಸ್ಲಾಮಾಬಾದ್: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿದ್ದು ಆತನೂ ಸೇರಿದಂತೆ 88 ಉಗ್ರರ ವಿರುದ್ಧ ನಿರ್ಬಂಧ ಹೆಚ್ಚಿಸಿರುವುದಾಗಿ ಹೇಳಿದ್ದ ಪಾಕಿಸ್ತಾನ ಯೂ ಟರ್ನ್ ತೆಗೆದುಕೊಂಡಿದೆ.
ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ಇಲ್ಲ. ಈ ಕುರಿತಾದ ಮಾಧ್ಯಮಗಳ ವರದಿ ಸುಳ್ಳು ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ. ಭಯೋತ್ಪಾದಕ ಸಂಘಟನೆಗಳ ಮೇಲೆ ಮತ್ತು ನಾಯಕರ ಮೇಲೆ ಪಾಕಿಸ್ತಾನ ಸರಕಾರ ನಿರ್ಬಂಧ ವಿಧಿಸಿದ್ದು ಇದರಲ್ಲಿ ಭಾರತದ ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂ ಹೆಸರೂ ಕೂಡ ಇತ್ತು.
ನಿಷೇಧಿತ 88 ಭಯೋತ್ಪಾದನೆ ಸಂಘಟನೆಗಳು ಮತ್ತು ನಾಯಕರ ಬಗ್ಗೆ ವಿಶ್ವಸಂಸ್ಥೆ ಒದಗಿಸಿದ ಮಾಹಿತಿಯ ಅನ್ವಯ ನಿರ್ಬಂಧ ಹೇರಿರುವುದಾಗಿ ಪಾಕಿಸ್ತಾನ ಹೇಳಿದ್ದು ಅದರಲ್ಲಿ ದಾವೂದ್ ಹೆಸರಿತ್ತು. ಆದರೆ ಇದನ್ನು ಅಲ್ಲಗಳೆದ ಪಾಕಿಸ್ತಾನ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ಇಲ್ಲವೆಂದು ತಿಳಿಸಿದೆ.