ಲಾಹೋರ್: ಸರ್ಕಾರೇತರ ಸಂಸ್ಥೆಯೊಂದು ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತರಾಯ್, ಕಾದಂಬರಿಕಾರ್ತಿ ಅಮೃತಾ ಪ್ರೀತಮ್ ಹಾಗೂ ನೃತ್ಯ ಕಲಾವಿದ ಮಹಾರಾಜ ಗುಲಾಮ್ ಹಸ್ ಕಥಕ್ ಸೇರಿ ಏಳು ಜನರ ಫೋಟೋಗಳಿರುವ 140 ಅಧಿಕ ಫಲಕಗಳನ್ನು ಪಾಕಿಸ್ತಾನದ ಲಾಹೋರ್ ನ ವಿವಿಧೆಡೆ ಅಳವಡಿಸಲು ಮುಂದಾಗಿದೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಗೌರವಾರ್ಥ ಅವರ ತಲಾ 20 ಫಲಕಗಳನ್ನು ಲಾಹೋರ್ ಸಂಗತ್ ಎಂಬ ಸಂಸ್ಥೆ ಅಳವಡಿಸುತ್ತಿದೆ. ದ ಗೆಟ್ ಅಫ್ ಗೋಲ್ ಬಾಗ್ (ನಸೀರ್ ಬಾಗ್), ದಾನಿ ರಾಮ್ ಸ್ಟ್ರೀಟ್, ಅನಾರ್ಕಲಿ, ದೆಹಲಿ ಮುಸ್ಲಿಂ ಹೋಟೆಲ್ ಗಳಲ್ಲಿ ಹಾಕಲಾಗುತ್ತಿದೆ.
ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ ರಾಯ್(1865-1928) ಅವರು ಪಂಜಾಬ್ ಕೇಸರಿ ಎಂದು ಹೆಸರು ಪಡೆದಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಪಂಜಾಬಿ ಹಾಗೂ ಹಿಂದಿ ಭಾಷೆಯಲ್ಲಿ ಬರೆಯುತ್ತಿದ್ದ ಭಾರತೀಯ ಕಾದಂಬರಿಕಾರ್ತಿ, ಕವಿ, ಲೇಖಕಿ ಅಮೃತಾ ಪ್ರೀತಮ್ (1919-2005)ಎರಡೂ ದೇಶಗಳ ಪಂಜಾಬ್ ನ್ನು ಹೆಚ್ಚು ಇಷ್ಟಪಡುತ್ತಿದ್ದರು. ಶಾಸ್ತ್ರೀಯ ನೃತ್ಯಕಾರ ಮಹಾರಾಜಾ ಗುಲಾಮ್ ಹಸನ್ ಕಥಕ್ (1905-2001) ಶಿಕ್ಷಕರಾಗಿಯೂ ಪ್ರಸಿದ್ಧರಾಗಿದ್ದರು.
ಈ ವಾರ ಲಾಹೋರ್ ಸಂಗತ್ ಸಂಸ್ಥೆ ಪಂಜಾಬ್ ವಿವಿ ಹಳೆಯ ಕ್ಯಾಂಪಸ್ ನಲ್ಲಿ ಪ್ರೊ. ಅನ್ನಾ ಮೋಲ್ಕಾ, ಲಾಹೋರ್ ಮ್ಯೂಸಿಯಂ ಹಾಗೂ ನ್ಯಾಷನಲ್ ಕಾಲೇಜ್ ಆಫ್ ಆರ್ಟ್ಸ್ ನಲ್ಲಿ ಭಾಯಿ ರಾಮ್ ಸಿಂಗ್ ಅವರ ಹೆಸರಿನ ಫಲಕ ಅಳವಡಿಸಿದೆ.