ಕೊರೊನಾ ವೈರಸ್ ವಿರುದ್ಧ ನಮ್ಮ ಲಸಿಕೆ 90 ಪ್ರತಿಶತ ಪರಿಣಾಮಕಾರಿಯಾಗಿದೆ ಅಂತಾ ಬ್ರಿಟನ್ನ ಆಸ್ಟ್ರಾಜೆನೆಕಾ ಹೇಳಿದೆ.
ಬ್ರಿಟನ್ ಹಾಗೂ ಬ್ರೆಜಿಲ್ನಲ್ಲಿ ನಡೆದ ಕೊನೆಯ ಹಂತದ ಪ್ರಯೋಗಗಳ ಮಾಹಿತಿಯ ಪ್ರಕಾರ ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿ ಪಡಿಸಿದ ಲಸಿಕೆಯ ಅರ್ಧ ಡೋಸ್ ಕೊರೊನಾ ವಿರುದ್ಧ 90 ಪ್ರತಿಶತ ಪರಿಣಾಮಕಾರಿಯಾಗಿದೆ ಎಂಬ ಫಲಿತಾಂಶ ಬಂದಿದೆ.
ಲಸಿಕೆ ಸಂಬಂಧ ಯಾವುದೇ ಗಂಭೀರ ಅಪಾಯಗಳು ಕಂಡು ಬಂದಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ಬಳಕೆ ಗ್ರಾಹಕ ಸ್ನೇಹಿ ದರದಲ್ಲಿ ಲಸಿಕೆ ಬಿಡುಗಡೆ ಮಾಡಲಿದ್ದೇವೆ ಅಂತಾ ಆಸ್ಟ್ರಾ ಮುಖ್ಯ ಕಾರ್ಯ ನಿರ್ವಾಹಕ ಪ್ಯಾಸ್ಕರ್ ಸೋರಿಯೊಟ್ ಹೇಳಿದ್ದಾರೆ.