ತನ್ನ ಅಸ್ಟ್ರಾಜೆಂಕಾ ಕೋವಿಡ್-19 ಲಸಿಕೆಯ ಸುರಕ್ಷತೆ ಹಾಗೂ ಪ್ರಭಾವವನ್ನು ಮಕ್ಕಳ ಮೇಲೆ ಪ್ರಯೋಗ ಮಾಡಲು ಆಕ್ಸ್‌ಫರ್ಡ್ ವಿವಿ ನಿರ್ಧರಿಸಿದೆ. ಇದೇ ತಿಂಗಳಲ್ಲಿ ಈ ಸಂಬಂಧ ಪ್ರಯೋಗಗಳನ್ನು ಮಾಡುವ ನಿರೀಕ್ಷೆ ಇದೆ.
6-17ರ ವಯೋಮಾನದ ಮಕ್ಕಳಲ್ಲಿ ChAdOx1 nCoV-19 ಲಸಿಕೆಯಿಂದ ರೋಗನಿರೋಧಕ ಶಕ್ತಿ ವರ್ಧನೆಯಾಗುತ್ತದೆಯೇ ಎಂದು ಪರೀಕ್ಷಿಸಲಾಗವುದು. ಈ ಲಸಿಕೆ ಮೂಲಕ ಕೋವಿಡ್-19 ಹಬ್ಬುವುದನ್ನು 67%ದಷ್ಟು ಕಡಿಮೆ ಮಾಡಬಹುದಾಗಿದೆ ಎಂದು ಆಕ್ಸ್‌ಫರ್ಡ್ ಅಧ್ಯಯನವೊಂದು ತಿಳಿಸುತ್ತದೆ.
ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಸಿಹಿ ಸುದ್ದಿ
“ಬಹುತೇಕ ಮಕ್ಕಳಲ್ಲಿ ಕೊರೋನಾ ವೈರಸ್ ಯಾವುದೇ ಪರಿಣಾಮ ಬೀರದೇ ಇದ್ದರೂ ಸಹ ಲಸಿಕೆಯು ಮಕ್ಕಳಲ್ಲಿ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ತಿಳಿಸುವುದು ಮುಖ್ಯ ಹಾಗೂ ಈ ಲಸಿಕೆಯಿಂದ ಕೆಲವು ಮಕ್ಕಳಿಗೆ ಲಾಭವಾಗುವ ಸಾಧ್ಯತೆ ಇದೆ,” ಎಂದು ಆಕ್ಸ್‌ಫರ್ಡ್ ಲಸಿಕೆಯ ಮುಖ್ಯ ತನಿಖಾಧಿಕಾರಿ ಆಂಡ್ರ‍್ಯೂ ಪೊಲ್ಲಾರ್ಡ್ ಹೇಳುತ್ತಾರೆ.
ಸಾರ್ಸ್-ಕೋವ್2 ಲಸಿಕೆಯನ್ನು ಎಳೆಯ ವಯಸ್ಸಿನ ಜನರಲ್ಲಿ ಹೇಗೆ ಕಂಟ್ರೋಲ್ ಮಾಡಬಹುದು ಎಂದು ಅರಿಯಲು ಇದು ನೆರವಾಗುತ್ತದೆ, ಎಂದು ಪೊಲ್ಲಾರ್ಡ್ ತಿಳಿಸಿದ್ದಾರೆ.