ಆಕ್ಸ್‌ಫರ್ಡ್: ವಿಶ್ವಕ್ಕೆ ಸುತ್ತಿಕೊಂಡ ಕೋವಿಡ್ ಭೂತ ಸದ್ಯಕ್ಕೆ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ವಿವಿಧ ದೇಶಗಳ ನೂರಾರು ವಿಜ್ಞಾನಿಗಳು ಕೋವಿಡ್ ಗೆ ಔಷಧ ಕಂಡು ಹಿಡಿಯಲು ನಿರಂತರ ಯತ್ನ ನಡೆಸಿದ್ದಾರೆ. ಆದರೂ, ಶೀಘ್ರ ಔಷಧವೂ ಸಿಗುವಂತಿಲ್ಲ. ಆದ್ದರಿಂದ ಸದ್ಯ ಔಷಧ ಬರುವವರೆಗೆ ರೋಗವನ್ನು ತಕ್ಷಣ ಪತ್ತೆ ಹಚ್ಚುವ ಕ್ರಮವಾದರೂ ಆಗಬೇಕಿದೆ.
ಆ ನಿಟ್ಟಿನಲ್ಲಿ ಅಮೆರಿಕಾದ ಆಕ್ಸ್‌ಫರ್ಡ್ ವಿಶ್ವ ವಿದ್ಯಾಲಯದ ವಿಜ್ಞಾನಿಗಳ ತಂಡ ಯಶಸ್ವಿಯಾಗಿದೆ. ಕೇವಲ ಐದೇ ನಿಮಿಷದಲ್ಲಿ ಕೋವಿಡ್ ಇದೆಯೋ ಇಲ್ಲವೋ ಎಂದು ಹೇಳುವ ಆಂಟಿಜನ್ ಪರೀಕ್ಷಾ ವ್ಯವಸ್ಥೆಯನ್ನು ಕಂಡು ಹಿಡಿಯಲಾಗಿದೆ.
ಇನ್ನು ಆರು ತಿಂಗಳಲ್ಲಿ ಹೊಸ ಡಿವೈಸ್ ಗೆ ಅನುಮೋದನೆ ದೊರೆಯಲಿದ್ದು, 2021 ರ ಮೂರು ಅಥವಾ ನಾಲ್ಕನೇ ತಿಂಗಳಲ್ಲೇ ಯಂತ್ರ ಪರೀಕ್ಷೆಗೆ ಲಭ್ಯವಾಗಲಿದೆ ಎಂದು ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಾರ್ಸ್ ಕೋವ್ 2 ಹಾಗೂ ಇತರ ವೈರಸ್ ಗಳ ಭಾಗಗಳನ್ನು ತಕ್ಷಣ ಗುರುತಿಸುವ ವಿಧಾನ ಇದಾಗಿದ್ದು, ವೆಚ್ಚವೂ ಕಡಿಮೆ ಇದೆ. ಆಕ್ಸ್‌ಫರ್ಡ್ ವಿವಿ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಅಚಿಲ್ಲೆಸ್ ಕಪ್ನಿಡೀಸ್ ಹೇಳಿದ್ದಾರೆ.