ಮಕ್ಕಳಿಗಾಗಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಅಸ್ಟ್ರಾಜೆನೆಕಾ ಕೋವಿಡ್ -19 ಲಸಿಕೆ ಅಭಿವೃದ್ಧಿಪಡಿಸಿತ್ತು. ಕೆಲ ಮಕ್ಕಳ ಮೇಲೆ ಆಂಟಿ-ಕೊರೊನಾ ವೈರಸ್ ಲಸಿಕೆಯ ಪ್ರಯೋಗ ಶುರು ಮಾಡುವುದಾಗಿ ಹೇಳಿತ್ತು. ಆದ್ರೆ ಪ್ರಯೋಗ ನಿಲ್ಲಿಸಿರುವುದಾಗಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮಂಗಳವಾರ ತಿಳಿಸಿದೆ. ಈ ಲಸಿಕೆಯಿಂದ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಕಾಡ್ತಿದೆ ಎಂಬ ಕಾರಣಕ್ಕೆ ಪ್ರಯೋಗವನ್ನು ನಿಲ್ಲಿಸಲಾಗಿದೆ.
ಲಸಿಕೆ ಸಂಪೂರ್ಣ ಸುರಕ್ಷಿತವಲ್ಲ. ರಕ್ತ ಹೆಪ್ಪುಗಟ್ಟುವ ಸಮಸ್ಯೆ ಕಾಡುವ ಸಾಧ್ಯತೆಯಿದೆ. ಯುಕೆ ಮೆಡಿಸಿನ್ಸ್ ಮತ್ತು ಹೆಲ್ತ್ ಕೇರ್ ಪ್ರಾಡಕ್ಟ್ಸ್ ರೆಗ್ಯುಲೇಟರ್ ಹೆಚ್ಚುವರಿ ಅಧ್ಯಯನ ನಡೆಸುತ್ತಿದ್ದು, ಅದ್ರ ಡೇಟಾ ನಿರೀಕ್ಷೆ ಮಾಡಲಾಗ್ತಿದೆ. ಅಸ್ಟ್ರಾಜೆನೆಕಾದಿಂದ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಎದುರಾಗುತ್ತದೆ ಎಂಬ ಪ್ರಶ್ನೆ ಅನೇಕ ದಿನಗಳಿಂದ ಕಾಡ್ತಿದೆ. ನಾರ್ವೆ ಮತ್ತು ಯುರೋಪ್ ನಲ್ಲಿ ಲಸಿಕೆ ಹಾಕಿಸಿಕೊಂಡ ಕೆಲವರಿಗೆ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಕಾಡಿತ್ತು.
ಯುಕೆ ಯಲ್ಲಿ ಒಟ್ಟು 1.8 ಮಿಲಿಯನ್ ಲಸಿಕೆಗಳಲ್ಲಿ 30 ಮಂದಿಗೆ ರಕ್ತ ಹೆಪ್ಪುಗಟ್ಟುವಿಕೆ ಕಂಡು ಬಂದಿದೆ. ಅದರಲ್ಲಿ ಏಳು ಮಾರಣಾಂತಿಕವಾಗಿದೆ ಎಂದು ಎಂಎಚ್‌ಆರ್‌ಎ ಕಳೆದ ವಾರ ವರದಿ ಮಾಡಿದೆ.