ಸಾಂಕ್ರಾಮಿಕ ರೋಗ ಕೊರೊನಾ ವಿರುದ್ಧ ಹೋರಾಟ ನಿರಂತರವಾಗಿ ನಡೆಯುತ್ತಿದೆ. ಕೊರೊನಾ ಮಹಾಮಾರಿ ತಡೆಗೆ ಲಸಿಕೆ ಪ್ರಯೋಗ ನಡೆಯುತ್ತಿದೆ. ಬ್ರಿಟನ್ ನಲ್ಲಿ ತುರ್ತು ವ್ಯಾಕ್ಸಿನೇಷನ್ ಗೆ ಅನುಮತಿ ಸಿಕ್ಕಿದೆ. ಈವರೆಗೆ ಫಿಜರ್ ಲಸಿಕೆಯನ್ನು ಬಳಸಲಾಗ್ತಾಯಿತ್ತು. ಈಗ ಆಕ್ಸ್ಫರ್ಡ್ / ಅಸ್ಟ್ರಾಜೆನೆಕಾ ಕೋವಿಡ್ -19 ಲಸಿಕೆ ಅಭಿಯಾನ ಶುರುವಾಗಿದೆ.
ಆಕ್ಸ್ಫರ್ಡ್/ಅಸ್ಟ್ರಾಜೆನೆಕಾ ಕೋವಿಡ್ -19 ಲಸಿಕೆ ಪ್ರಯೋಗ ನಡೆಯುತ್ತಿದೆ. ಈ ಪ್ರಯೋಗದಲ್ಲಿ 82 ವರ್ಷದ ವ್ಯಕ್ತಿ ಭಾಗಿಯಾಗಿದ್ದಾರೆ. 82 ವರ್ಷದ ಬ್ರಿಯಾನ್ ಪಿಂಕರ್‌ಗೆ ಮೊದಲ ಲಸಿಕೆ ನೀಡಲಾಗಿದೆ. ಬ್ರಿಯಾನ್, ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ನಿರ್ವಹಣಾ ವ್ಯವಸ್ಥಾಪಕರಾಗಿದ್ದಾರೆ. ಕ್ಲಿನಿಕಲ್ ಪ್ರಯೋಗ ಹೊರತುಪಡಿಸಿ ಹೆಚ್ಚುವರಿಯಾಗಿ ಆಕ್ಸ್ಫರ್ಡ್ ಲಸಿಕೆ ತೆಗೆದುಕೊಂಡ ವಿಶ್ವದ ಮೊದಲ ವ್ಯಕ್ತಿಯಾಗಿದ್ದಾರೆ ಬ್ರಿಯಾನ್.
ಆಕ್ಸ್ಫರ್ಡ್/ಅಸ್ಟ್ರಾಜೆನೆಕಾದ ಕೋವಿಶೀಲ್ಡ್ ಲಸಿಕೆಯನ್ನು ಬ್ರಿಟನ್ ನಲ್ಲಿ ಹಾಕಲಾಗ್ತಿದೆ. ಬ್ರಿಯಾನ್ ಆಸ್ಪತ್ರೆಯೊಂದರಲ್ಲಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಲಸಿಕೆ ಹಾಕಿಸಿಕೊಂಡು ಖುಷಿಯಾಗಿದ್ದೇನೆ ಎನ್ನುವ ಬ್ರಿಯಾನ್, ಫೆಬ್ರವರಿಯಲ್ಲಿ ಮದುವೆಯ 48ನೇ ವಾರ್ಷಿಕೋತ್ಸವ ಆಚರಿಸುವ ತಯಾರಿಯಲ್ಲಿದ್ದಾರೆ. ಆಕ್ಸ್ಫರ್ಡ್ ಲಸಿಕೆ ತಯಾರಿಸಿರುವುದು ಖುಷಿ ನೀಡಿದೆ ಎಂದಿರುವ ಬ್ರಿಯಾನ್ ತಮ್ಮ ಸಂಪೂರ್ಣ ಜೀವನವನ್ನು ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯಕ್ಕೆ ಮುಡುಪಾಗಿಟ್ಟಿದ್ದಾರೆ.