ಕೊರೊನಾ ವೈರಸ್ ವಿರುದ್ಧದ ಲಸಿಕೆ ಕಂಡುಹಿಡಿಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಆದ್ರೆ ಯಾವ ದೇಶ ಮೊದಲು ಕೊರೊನಾ ಲಸಿಕೆ ಕಂಡು ಹಿಡಿಯಲಿದೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಈ ರೇಸ್ ನಲ್ಲಿ ಆಕ್ಸ್ ಫರ್ಡ್ ಕೂಡ ಇದೆ.
ಆಕ್ಸ್‌ಫರ್ಡ್ ಸಂಶೋಧಕಿ ಡಾ. ಸಾರಾ ಗಿಲ್ಬರ್ಟ್ ಮತ್ತು ಅವರ ತಂಡವು ಅಭಿವೃದ್ಧಿಪಡಿಸಿದ ChAdOx1 ಹೆಸರಿನ ಕೋವಿಡ್ -19 ಲಸಿಕೆ ಭರವಸೆಯ ಫಲಿತಾಂಶಗಳನ್ನು ತೋರಿಸಿದೆ. ಸಾರಾ ಸ್ವತಃ ಲಸಿಕೆಯ ಬಗ್ಗೆ ಹೆಚ್ಚು ಆಶಾವಾದಿಯಾಗಿದ್ದಾರೆ. ಲಸಿಕೆಯ ಪರೀಕ್ಷೆ ನಡೆಯುತ್ತಿದೆ. ಸಾಮಾನ್ಯವಾಗಿ ಲಸಿಕೆ ಪರೀಕ್ಷೆಗೆ ಸ್ವಯಂ ಸೇವಕರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆದ್ರೆ ಸಾರಾ ಲಸಿಕೆ ಮೇಲೆ ಹೆಚ್ಚು ಭರವಸೆ ಹೊಂದಿದ್ದು, ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ.
ಸಾರಾರ ಮೂವರು ಮಕ್ಕಳು ಈ ಲಸಿಕೆ ಪರೀಕ್ಷೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 21 ವರ್ಷದ ತ್ರಿವಳಿ ಮಕ್ಕಳು ಬಯೋಕೆಮಿಸ್ಟ್ರಿ ಅಧ್ಯಯನ ಮಾಡ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಾರಾ, ನಾನು ಮನೆಯಲ್ಲಿರುವುದು ಕಡಿಮೆ. ಈ ವಿಷ್ಯವನ್ನು ನಾವು ಚರ್ಚಿಸಿಲ್ಲ. ಆದ್ರೆ ಪರೀಕ್ಷೆ ನಮಗೆ ಹೊಸದಲ್ಲ. ಎಷ್ಟು ಪ್ರಮಾಣದ ಡೋಸ್ ನೀಡಬೇಕೆಂಬುದು ನಮಗೆ ಗೊತ್ತು. ಇದೊಂದು ಸುರಕ್ಷಿತ ಪರೀಕ್ಷೆಯೆಂದು ಸಾರಾ ಹೇಳಿದ್ದಾರೆ.