alex Certify BIG NEWS: ಕೊನೆಗೂ ಬಂತು ಸಂಜೀವಿನಿ, ಆಕ್ಸ್‌ ಫರ್ಡ್‌ ವಿವಿ ಪ್ರಯೋಗ ಸಕ್ಸಸ್ – ವಿಶ್ವದ ಮೊದಲ ಕೊರೊನಾ ಲಸಿಕೆ ಶೀಘ್ರದಲ್ಲೇ ಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊನೆಗೂ ಬಂತು ಸಂಜೀವಿನಿ, ಆಕ್ಸ್‌ ಫರ್ಡ್‌ ವಿವಿ ಪ್ರಯೋಗ ಸಕ್ಸಸ್ – ವಿಶ್ವದ ಮೊದಲ ಕೊರೊನಾ ಲಸಿಕೆ ಶೀಘ್ರದಲ್ಲೇ ಲಭ್ಯ

ऑक्सफोर्ड में बन रही कोरोना वैक्सीन के सफल होने का दावा

ವಿಶ್ವದಾದ್ಯಂತ ಕೊರೊನಾ ವೈರಸ್ ಗೆ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆಯುತ್ತಿದೆ. ಅನೇಕ ದೇಶಗಳು ಒಂದೊಂದು ಹಂತದ ಪ್ರಯೋಗದಲ್ಲಿ ಯಶಸ್ವಿಯಾಗಿರುವ ಸುದ್ದಿ ಪ್ರಸಾರ ಮಾಡ್ತಿವೆ. ಈ ಮಧ್ಯೆ ಬ್ರಿಟನ್‌ನಿಂದ ಖುಷಿ ಸುದ್ದಿ ಬಂದಿದೆ. ಆಕ್ಸ್‌ ಫರ್ಡ್ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೊರೊನಾ ಲಸಿಕೆ ಪ್ರಯೋಗದ ಆರಂಭಿಕ ಫಲಿತಾಂಶಗಳು ಯಶಸ್ವಿಯಾಗಿವೆ ಎನ್ನಲಾಗಿದೆ.

ಆಕ್ಸ್‌ ಫರ್ಡ್ ವಿಶ್ವವಿದ್ಯಾಲಯದ ಜೆನ್ನರ್ ಇನ್‌ಸ್ಟಿಟ್ಯೂಟ್‌ನಲ್ಲಿ ಕೊರೊನಾ ಲಸಿಕೆಯ ಮಾನವ ಪ್ರಯೋಗಗಳು ಯಶಸ್ವಿಯಾಗಿವೆ ಎಂದು ಬ್ರಿಟಿಷ್ ಪತ್ರಿಕೆ ದಿ ಟೆಲಿಗ್ರಾಫ್ ತನ್ನ ವರದಿಯಲ್ಲಿ ತಿಳಿಸಿದೆ. ಕೆಲವು ಯುಕೆ ಸ್ವಯಂಸೇವಕರ ಮೇಲೆ ಲಸಿಕೆ ಪರೀಕ್ಷಿಸಲಾಯಿತು. ಅದರ ನಂತರ ಕೆಲವೇ ದಿನಗಳಲ್ಲಿ, ಸ್ವಯಂಸೇವಕರ ದೇಹದಲ್ಲಿ ಪ್ರತಿಕಾಯಗಳು ಮತ್ತು ಟಿ ಬಾಡಿ ಕೋಶಗಳು ರೂಪುಗೊಳ್ಳುತ್ತಿವೆ.

ಆದರೆ ಇಲ್ಲಿಯವರೆಗೆ ಜೆನ್ನರ್ ಸಂಸ್ಥೆ ಯಾವುದೇ ವಿವರಣೆಯನ್ನು ನೀಡಿಲ್ಲ. ಆಕ್ಸ್‌ ಫರ್ಡ್ ವಿಶ್ವವಿದ್ಯಾಲಯದಲ್ಲಿ ಏಪ್ರಿಲ್‌ನಲ್ಲಿ ಕೊರೊನಾ ವೈರಸ್‌ನ ಪರೀಕ್ಷೆಗಳು ಪ್ರಾರಂಭವಾಗಿದ್ದವು. ಆ ಸಮಯದಲ್ಲಿ 500 ಸ್ವಯಂಸೇವಕರ ಮೇಲೆ ಲಸಿಕೆ ಪರೀಕ್ಷೆಯನ್ನು ಮಾಡಲಾಯಿತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...