ಕೈರೊ: ವಿಶ್ವದ ವಿವಿಧ ದೇಶಗಳು ಈಗ ಅನಿವಾಸಿಗಳನ್ನು ಹೊರ ಹಾಕಲು ಪ್ರಾರಂಭಿಸಿವೆ. ಈಗ ಇದಕ್ಕೆ ಕುವೈತ್ ಹೊಸ ಸೇರ್ಪಡೆಯಾಗಿದೆ. ಈ ಮೂಲಕ ನಿವಾಸಿಗಳಿಗೆ ತಮ್ಮ ದೇಶಕ್ಕೆ ವಾಪಸ್ ತರುವ ಅನಿವಾರ್ಯತೆ ಎದುರಾಗುತ್ತದೆ.
ಕುವೈತ್ ಮುಂದಿನ ವರ್ಷ 70 ಸಾವಿರ ಅನಿವಾಸಿಗಳನ್ನು ದೇಶ ಬಿಡಿಸಲು ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪ್ರಕ್ರಿಯೆಗಳು ಆರಂಭಗೊಂಡಿದ್ದು ಮುಂದಿನ ವರ್ಷದ ಸುಮಾರಿಗೆ ಎಲ್ಲರೂ ಅವರವರ ದೇಶಕ್ಕೆ ಮರಳಬೇಕಿದೆ.
60 ವರ್ಷ ದಾಟಿದವರ ಅನಿವಾಸಿ ಪ್ರಮಾಣಪತ್ರವನ್ನು ನವೀಕರಣ ಮಾಡದೇ ಇರಲು ದೇಶ ನಿರ್ಧರಿಸಿದೆ. ಈ ನಿರ್ಧಾರ ಕಟ್ಟುನಿಟ್ಟಾಗಿ ಆಚರಣೆಗೆ ಬರಲಿದೆಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.
ಕುವೈತ್ ನ ಮಾನವ ಸಂಪನ್ಮೂಲ ಇಲಾಖೆ ಅಂಥ ಅನಿವಾಸಿಗಳ ಪಟ್ಟಿ ತಯಾರಿಸಿದೆ.