
ಪಾಟ್ಸ್ಡ್ಯಾಮ್ ಇನ್ಸ್ಟಿಟ್ಯೂಟ್ ಫಾರ್ ಕ್ಲೈಮೇಟ್ ಇಂಪ್ಯಾಕ್ಟ್ ರಿಸರ್ಚ್ನ ತಜ್ಞರು ಈ ಶತಮಾನದ ಮಧ್ಯ ಭಾಗದಲ್ಲಿ ಜಾಗತಿಕ ಆಹಾರದ ಬೇಡಿಕೆಯು ಶೇಕಡಾ 50ರಷ್ಟು ಹೆಚ್ಚಾಗಲಿದೆ ಅಂತಾ ಹೇಳಿದ್ದಾರೆ. ಪ್ರಸ್ತುತ 29 ಪ್ರತಿಶದಷ್ಟು ಮಂದಿಯಲ್ಲಿ 9 ಶೇಕಡಾದಷ್ಟು ಜನರು ಬೊಜ್ಜಿನ ಸಮಸ್ಯೆ ಹೊಂದಿದ್ದರೆ, ಮುಂದಿನ ದಿನಗಳಲ್ಲಿ ಈ ಪ್ರಮಾಣ ಶೇಕಡಾ 16ಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಆಹಾರ ವ್ಯರ್ಥ ಪ್ರಮಾಣದಲ್ಲಿ ಏರಿಕೆ ಹಾಗೂ ಕೃಷಿ ವ್ಯವಸ್ಥೆ ಮೇಲೆ ಪರಿಸರದ ಪರಿಣಾಮದಿಂದಲೂ ಆಹಾರ ವ್ಯವಸ್ಥೆ ಬದಲಾಗಬಲ್ಲುದು. ಮಾತ್ರವಲ್ಲದೇ ಪ್ರಾಣಿ ಮೂಲಗಳ ಆಹಾರ, ಸಂಸ್ಕರಿಸಿದ ಆಹಾರ ಉತ್ಪನ್ನಗಳಿಂದ ಬೊಜ್ಜಿನ ಸಮಸ್ಯೆ ಉಂಟಾಗಲಿದೆ ಅಂತಾ ಸಂಶೋಧಕರು ಹೇಳಿದ್ದಾರೆ.
ಅಪೌಷ್ಟಿಕತೆ ಬಗ್ಗೆಯೂ ಅಧ್ಯಯನ ನಡೆಸಲಾಗಿದ್ದು ಇಡೀ ವಿಶ್ವದ ಜನರಿಗೆ ಸಾಕಾಗುವಷ್ಟು ಆಹಾರ ಭೂಮಿ ಮೇಲಿದೆ. ಆದರೆ ಅದನ್ನ ಕೊಳ್ಳಲು ಆದಾಯ ಸಮಸ್ಯೆ ಇರೋದ್ರಿಂದ ಅಪೌಷ್ಠಿಕತೆ ತಾಂಡವಾಡುತ್ತಿದೆ ಅಂತಾ ಅಧ್ಯಯನ ಹೇಳಿದೆ.