ಚೀನಾದ ಬೃಹತ್ ರಾಕೆಟ್ನ ಭಗ್ನಾವಶೇಷವು ಶೀಘ್ರದಲ್ಲೇ ಭೂಮಿಯ ಮೇಲ್ಮೈಗೆ ಬಂದು ಅಪ್ಪಳಿಸಲಿದೆ ಎಂದು ವರದಿಯಾಗಿದೆ.
ಈ ವಾರಾಂತ್ಯದಲ್ಲಿ ನಿಯಂತ್ರಣ ತಪ್ಪಿದ ರಾಕೆಟ್ನ ಭಗ್ನಾವಶೇಷಗಳು ಭೂಮಿಯ ಮೇಲ್ಮೈಗೆ ಬರಲಿದೆ. ಈ ಹಿಂದೆಯೂ ಕೂಡ ಈ ರೀತಿ ಭಗ್ನಾವಶೇಷಗಳು ಭೂಮಿಯ ಮೇಲ್ಮೈಗೆ ಅಪ್ಪಳಿಸಿದ್ದವು. ಆದರೆ ಇದರಿಂದ ಯಾವುದೇ ಅಪಾಯ ಇಲ್ಲದೇ ಇರೋದ್ರಿಂದ ಭಯಭೀತರಾಗುವ ಕಾರಣವಿಲ್ಲ ಎಂದು ವರದಿ ತಿಳಿಸಿದೆ.
ಹೆಚ್ಚಿನ ಭಗ್ನಾವಶೇಷಗಳು ಭೂಮಿಯ ವಾತಾವರಣಕ್ಕೆ ಎಂಟ್ರಿ ಕೊಡುವ ಮುನ್ನವೇ ನಾಶವಾಗುತ್ತದೆ. ಆದರೆ ಕೆಲವೊಂದು ಅಪರೂಪದ ಪ್ರಕರಣದಲ್ಲಿ ದೊಡ್ಡ ಭಗ್ನಾವಶೇಷಗಳು ಭೂಮಿಗೆ ಬಂದು ಅಪ್ಪಳಿಸಬಹುದು. ತೀರಾ ಇತ್ತೀಚಿನ ಪ್ರಕರಣದಲ್ಲಿ ಕಳೆದ ವರ್ಷ ಅಟ್ಲಾಂಟಿಕ್ ಮಹಾಸಾಗರದಲ್ಲಿ ಬೀಳುವ ಮುನ್ನ ಲಾಸ್ ಏಂಜಲೀಸ್ ಹಾಗೂ ಸೆಂಟ್ರಲ್ ಪಾರ್ಕ್ ಮೇಲೆ ಹಾದು ಹೋಗಿತ್ತು.
ಈ ರೀತಿಯ ಭಗ್ನಾವಶೇಷಗಳು ವಾತಾವರಣದಲ್ಲಿ ತೇಲುತ್ತಿರುವ ವೇಳೆಯಲ್ಲಿ ಹವಾಮಾನ ವರದಿ ನೀಡುವ ಉಪಗ್ರಹಗಳ ಕಾರ್ಯಕ್ಕೆ ಅಡ್ಡಿ ಉಂಟು ಮಾಡಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ರಕ್ಷಣಾ ಇಲಾಖೆ ವಕ್ತಾರ ಮೈಕ್ ಹೊವಾರ್ಡ್, ಚೀನಾದ ಲಾಂಗ್ ಮಾರ್ಚ್ 5 ಬಿ ರಾಕೆಟ್ ಮೇ 8ನೇ ತಾರೀಖಿನ ಸುಮಾರಿಗೆ ಭೂಮಿಯ ವಾತಾವರಣವನ್ನ ಪ್ರವೇಶಿಸುವ ನಿರೀಕ್ಷೆಯಿದೆ. ಅಮೆರಿಕದ ಸ್ಪೇಸ್ ಕಮಾಂಡ್ ಇದೀಗ ರಾಕೆಟ್ ಭಗ್ನಾವಶೇಷದ ಪಥವನ್ನ ಪತ್ತೆ ಮಾಡುತ್ತಿದೆ. ಭಗ್ನಾವಶೇಷ ಎಲ್ಲಿ ಬಂದು ಅಪ್ಪಳಿಸಲಿದೆ ಅನ್ನೋದನ್ನ ಈಗಾಗಲೇ ನಿಖರವಾಗಿ ಹೇಳೋದು ಕಷ್ಟ ಎಂದು ಹೇಳಿದ್ದಾರೆ.
ಮೇ 8 ಹಾಗೂ 10ನೇ ತಾರೀಖಿನ ಒಳಗಾಗಿ ಮತ್ತೊಮ್ಮೆ ಪ್ರವೇಶಿಸಬಹುದು ಎಂದು ನಿರೀಕ್ಷಿಸಲಾಗಿದೆ. ಈ ಎರಡು ದಿನಗಳ ಅವಧಿಯಲ್ಲಿ ಅದು ಪ್ರಪಂಚದಾದ್ಯಂತ 30 ಬಾರಿ ಪರ್ಯಟನೆ ಮಾಡಬಹುದು. ಈ ಭಗ್ನಾವಶೇಷವು ಪ್ರತಿ ಗಂಟೆಗೆ 18 ಸಾವಿರ ಮೈಲಿ ದೂರದಲ್ಲಿ ಪ್ರಯಾಣ ಮಾಡುತ್ತದೆ ಎಂದು ಸಹ ಹೊವಾರ್ಡ್ ಹೇಳಿದ್ದಾರೆ.