ಅಮೆರಿಕ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಈಗ ಕೋವಿಡ್-19 ವಿರುದ್ಧದ ಲಸಿಕೆ ಕಾರ್ಯಕ್ರಮದ ಮೊದಲ ಹಂತ ಚಾಲ್ತಿಯಲ್ಲಿದೆ.
ಮೊದಲ ಹಂತದ ಲಸಿಕೆ ಕಾರ್ಯಕ್ರಮದಲ್ಲಿ 65 ವರ್ಷ ಮೇಲ್ಪಟ್ಟವರು, ಮುಂಚೂಣಿ ಆರೋಗ್ಯ ಕಾರ್ಯಕರ್ತರು, ಶಿಕ್ಷಕರು ಒಳಗೊಳ್ಳಲಿದ್ದಾರೆ.
ನಗರದಲ್ಲಿ ವಾಸಿಸುವ ಡೇವಿಡ್ ಮ್ಯಾಕ್‌ಮಿಲನ್ ಹೆಸರಿನ ಕಾನೂನು ವಿದ್ಯಾರ್ಥಿಯೊಬ್ಬ ತನ್ನ ಗೆಳೆಯನ ಜೊತೆಗೆ ಗ್ರಾಸರಿ ಸ್ಟೋರ್‌ಗೆ ಶಾಪಿಂಗ್‌ಗೆ ಎಂದು ಹೋಗಿದ್ದ ವೇಳೆ, ಇಬ್ಬರನ್ನೂ ಅಡ್ಡಗಟ್ಟಿದ ಫಾರ್ಮಾಸಿಸ್ಟ್ ಒಬ್ಬರು ಅವರಿಗೆ ಮಾಡೆರ್ನಾ ಲಸಿಕೆಯ ಶಾಟ್‌ಗಳನ್ನು ಕೊಟ್ಟಿದ್ದಾರೆ. ಸಾರ್ವಜನಿಕ ಲಸಿಕೆ ಕಾರ್ಯಕ್ರಮಕ್ಕೆಂದು ತರಲಾಗಿದ್ದ ಈ ಲಸಿಕೆಗಳನ್ನು ಕೊಡಲು ಯಾರೂ ಸಿಗದೇ ಇದ್ದ ಸಮಯದಲ್ಲಿ ಈ ಇಬ್ಬರಿಗೆ ಹೀಗೆ ಚುಚ್ಚುಮದ್ದು ಕೊಡಲಾಗಿದೆ. ಮಾರ್ಗಸೂಚಿಯ ಪ್ರಕಾರ ಇಬ್ಬರಿಗೂ ಎರಡನೇ ಹಂತದ ಲಸಿಕೆಗಳನ್ನು ಕೊಡುವುದು ಇನ್ನೂ ಬಾಕಿ ಇದೆ.
ಕೋವಿಡ್-19 ನಿರೋಧಕ ಚುಚ್ಚುಮದ್ದುಗಳು ಸಾಮಾನ್ಯವಾಗಿ ಲ್ಯಾಬ್‌ನಿಂದ ಹೊರತೆಗೆದ ಬಳಿಕ ಕೆಲವೇ ಗಂಟೆಗಳಲ್ಲಿ ಕೆಟ್ಟು ಹೋಗುತ್ತವೆ. ಈ ಕಾರಣದಿಂದಾಗಿ ಈ ಚುಚ್ಚುಮದ್ದುಗಳನ್ನು ವ್ಯರ್ಥ ಮಾಡಬಾರದು ಎಂಬ ಕಾರಣಕ್ಕೆ ಹೀಗೆ ಮಾಡಲಾಗಿದೆ ಎಂದು ಎನ್‌ಬಿಸಿ ವರದಿ ಮಾಡಿದೆ.