ಅಮೆರಿಕದ ಒರೆಗಾನ್ ರಾಜ್ಯದ ಸಾರ್ವಜನಿಕ ಆರೋಗ್ಯ ಪ್ರಾಧಿಕಾರ ಕೊರೊನಾ ಸಂಬಂಧಿ ಮಾಹಿತಿ ನೀಡುವ ವೇಳೆ ವಿಚಿತ್ರ ಉಡುಗೆಗಳನ್ನ ತೊಡುವ ಮೂಲಕ ವಿವಾದಕ್ಕೆ ಸಿಲುಕಿದೆ.
ಕೋವಿಡ್ ಸಂಬಂಧಿ ಪ್ರಮುಖ ಅಂಕಿಅಂಶಗಳನ್ನ ಹಂಚಿಕೊಳ್ಳುತ್ತಿರುವ ಮಹಿಳೆ ಜೋಕರ್ ರೂಪದಲ್ಲಿ ತಯಾರಾಗಿದ್ದು ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಕಪ್ಪು ಬಣ್ಣದ ಡಾಟೆಡ್ ಶರ್ಟ್, ಹಳದಿ ಪ್ಯಾಂಟ್ ಹಾಗೂ ಕೆಂಪು ಬಣ್ಣದ ಟೈ ಹಾಕಿಕೊಂಡಿರುವ ಮಹಿಳೆಯ ಮುಖಕ್ಕೆ ಜೋಕರ್ ರೀತಿಯಲ್ಲಿ ಮೇಕಪ್ ಮಾಡಲಾಗಿದೆ. ಇದರಲ್ಲಿ ಇನ್ನೊಬ್ಬ ವ್ಯಕ್ತಿಯೂ ಇದ್ದು ಆತ ಸಾಂಕೇತಿಕ ಭಾಷೆಯ ಮೂಲಕ ಮಾತನಾಡುತ್ತಿದ್ದಾನೆ.
ಜೋಕರ್ ರೀತಿಯಲ್ಲಿ ತಯಾರಾದ ಮಹಿಳೆ ಕ್ಲೇರ್ ಪೋಚೆ, ಒರೆಗಾನ್ನಲ್ಲಿ ಒಟ್ಟು 38160 ಪ್ರಕರಣಗಳು ದಾಖಲಾಗಿವೆ. ಇಂದು 392 ಹೊಸ ಪ್ರಕರಣಗಳು ವರದಿಯಾಗಿವೆ. ಹಾಗೂ ಕೊರೊನಾದಿಂದಾಗಿ ಇಂದು ಮೂವರು ಸಾವನ್ನಪ್ಪಿದ್ದಾರೆ ಎಂದು ಹೇಳಿ ಮುಖಕ್ಕೆ ಮಾಸ್ಕ್ ಧರಿಸಿದ್ದಾರೆ. ತಮಾಷೆಯಾಗಿ ಕಾಣುವ ಉಡುಪು ಹಾಕಿ ಮಾಡಿರುವ ಈ ವಿಡಿಯೋ ಟ್ವಿಟರ್ನಲ್ಲಿ 1 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ.