
ತನ್ನ ಮಕ್ಕಳನ್ನು ಕಳೆದುಕೊಂಡ ತಾಯಿಯ ದುಃಖ ಕಲ್ಪನೆಗೂ ಮೀರಿದ್ದು. ಮೃತಪಟ್ಟ ತನ್ನ ನವಜಾತ ಮರಿಯನ್ನು ಸುಮಾರು ಎರಡು ವಾರಕ್ಕೂ ಅಧಿಕ ದಿನ ತಿಮಿಂಗಿಲವೊಂದು ಹೊತ್ತು ಸಮುದ್ರದಲ್ಲಿ ಓಡಾಡಿದ ದೃಶ್ಯ ಎರಡು ವರ್ಷದ ಹಿಂದೆ ಜನ ನೋಡಿದ್ದರು. ಈಗ ಅದೇ ತಿಮಿಂಗಿಲ ಮತ್ತೆ ಗರ್ಭವತಿಯಾಗಿದೆ.
ಸಮುದ್ರ ಜೀವ ವೈವಿಧ್ಯ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ ಸರ್ಕಾರೇತರ ಲಾಭ ರಹಿತ ಸಂಸ್ಥೆ ಎಸ್ಆರ್3 ವಾರಾಂತ್ಯದಲ್ಲಿ ಈ ವಿಷಯವನ್ನು ಟ್ವಿಟ್ಟರ್ ನಲ್ಲಿ ಪ್ರಕಟಿಸಿದೆ. ತೆಹಲ್ಕಾ ಅಥವಾ ಜೆ35 ಹಾಗೂ ಎಲ್ 72 ಎಂಬ ಹೆಸರಿನ ತಿಮಿಂಗಿಲಗಳ ಡ್ರೋಣ್ ಫೋಟೊಗಳನ್ನು ಪ್ರಕಟಿಸಿದೆ.
2018 ರಲ್ಲಿ ತನ್ನ ಮೃತ ಮರಿಯನ್ನು ನೀರಿನಲ್ಲಿ ಕೆಳಗೆ ಬೀಳಲು ಬಿಡದೇ 17 ದಿನಗಳವರೆಗೆ ಸಮುದ್ರದಲ್ಲೇ ಹೊತ್ತು ಕೆನಡಾ ಹಾಗೂ ವಾಯವ್ಯ ಅಮೆರಿಕದ ಸಮುದ್ರದಲ್ಲಿ ಓಡಾಡುತ್ತಿತ್ತು. ಇದು ಅಳಿವಿನ ಅಂಚಿನಲ್ಲಿರುವ ತಿಮಿಂಗಿಲದ ಪ್ರಭೇದವಾಗಿದೆ. ಬೇಟೆ ಸಿಗದೇ ಪೋಷಕಾಂಶ ಕೊರತೆ ಎದುರಿಸುವ ಇವುಗಳ ಹೆಚ್ಚಿನ ಗರ್ಭಗಳು ನಿಲ್ಲುವುದಿಲ್ಲ ಅಥವಾ ಹುಟ್ಟಿದ ಮರಿಗಳು ಸಾಯುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ.