ಕೆಲಸಕ್ಕೆ ಅರ್ಜಿ ಸಲ್ಲಿಸುವ ವೇಳೆ ರೆಸ್ಯೂಮೆಯನ್ನು ಬಹಳಷ್ಟು ಬಾರಿ ಡಬಲ್ ಚೆಕಿಂಗ್ ಮಾಡುವುದು ಅಗತ್ಯ. ನಿಮ್ಮ ಸಿವಿಯಲ್ಲಿ ಒಂದೇ ಒಂದು ತಪ್ಪಿದ್ದರೂ ಸಹ ಸಂದರ್ಶಕರು ನಿಮ್ಮ ಅರ್ಜಿಯನ್ನು ರಿಜೆಕ್ಟ್ ಮಾಡುವ ಸಾಧ್ಯತೆಗಳು ಇರುತ್ತವೆ.
ಆದರೆ ಕಣ್ಣಿಗೆ ರಾಚುವಂಥ ಪ್ರಮಾದವೊಂದನ್ನು ಮಾಡಿದರೆ ಹೇಗಿರಬಹುದು ಎಂದು ಒಮ್ಮೆ ಊಹಿಸಿಕೊಳ್ಳಿ. ಇಂಥದ್ದೇ ಒಂದು ನಿದರ್ಶನದಲ್ಲಿ, ದೊಡ್ಡದೊಂದು ಲೋಪ ಇರುವುದನ್ನು ನೋಡದೇ ತನ್ನ ಸಿವಿಯನ್ನು ಸಂದರ್ಶಕರಿಗೆ ಕಳುಹಿಸಿದ ಯುವತಿಯೊಬ್ಬರು ಬಳಿಕ ತಮ್ಮ ತಪ್ಪೇನು ಎಂದು ಅರಿತಿದ್ದಾರೆ.
EPFO ಚಂದಾದಾರರಿಗೆ ಭರ್ಜರಿ ಗುಡ್ ನ್ಯೂಸ್: ಮನೆ ಬಾಗಿಲಲ್ಲೇ ಸಿಗಲಿದೆ ಜೀವನ ಪ್ರಮಾಣ ಪತ್ರ
ಬಹಳಷ್ಟು ಜನರಂತೆ ಟೆಂಪ್ಲೇಟ್ ಒಂದನ್ನು ಇಟ್ಟುಕೊಂಡು ತಮ್ಮ ಸಿವಿ ಸಿದ್ಧಪಡಿಸಿಕೊಂಡ ಮಾರಿಸ್ಸಾಮ, ಟೆಂಪ್ಲೇಟ್‌ನಲ್ಲಿದ್ದ ಫೋಟೋ ತೆಗೆದು ಹಾಕಿ ತನ್ನ ಭಾವಚಿತ್ರ ಹಾಕುವುದನ್ನು ಮರೆತಿರುವ ವಿಚಾರವನ್ನು ಬಹಳ ತಡವಾಗಿ ಅರಿತುಕೊಂಡಿದ್ದಾರೆ. ಸ್ತೆತೋಸ್ಕೋಪ್ ಧರಿಸಿರುವ ವಿದ್ಯಾರ್ಥಿಯೊಬ್ಬರ ಚಿತ್ರ ಆ ಟೆಂಪ್ಲೇಟ್‌ನಲ್ಲಿ ಹಾಗೇ ಉಳಿದುಬಿಟ್ಟಿತ್ತು.
ಈ ಲೋಪಭರಿತ ರೆಸ್ಯೂಮೆ ನೆಟ್ಟಿಗರ ಫನ್ನಿ ಕಾಮೆಂಟ್‌ಗಳಿಗೆ ಗುರಿಯಾಗಿದ್ದು, ”ಅರ್ಜಿಯನ್ನು ಕಂಡ ಎಚ್‌ಆರ್ ಸಿಬ್ಬಂದಿಗೆ ಅದೆಂಥ ಅಚ್ಚರಿಯಾಗಿರಬಹುದು ಊಹಿಸಿಕೊಳ್ಳಿ” ಎಂದು ಒಬ್ಬರು ಕಾಮೆಂಟ್ ಹಾಕಿದ್ದಾರೆ.