ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬಂದ ಸಚಿವೆ ಮಾಸ್ಕ್ ಧರಿಸದೆ ಇರುವುದು ಸ್ವಯಂ ಅರಿವಾಗಿ, ಭಯಭೀತರಾಗಿ ತಮ್ಮ ಕಾರಿನ ಕಡೆಗೆ ಹೆಜ್ಜೆ ಹಾಕಿದ ಪ್ರಸಂಗ ನಡೆದಿದೆ.
ಈ ಘಟನೆ ನಡೆದಿದ್ದು, ಪ್ಯಾರಿಸ್ ನಲ್ಲಿ. ಜುಲೈ 14ರಂದು ಸಾಂಕೇತಿಕವಾಗಿ ಆಯೋಜನೆಗೊಂಡಿದ್ದ ಬಾಸ್ಟಿಲ್ ಡೇ ಸಮಾರಂಭದಲ್ಲಿ ಪಾಲ್ಗೊಳ್ಳಲು ಅಲ್ಲಿನ ಕೈಗಾರಿಕಾ ಸಚಿವರಾದ ಆಗ್ನೆಸ್ ಪನಿಯರ್ ರನ್ನಾಚೆರ್ ಆಗಮಿಸಿದ್ದರು.
ಕಾರ್ಯಕ್ರಮ ನಡೆಯುವ ಸ್ಥಳದ ಬಳಿ ಕಾರಿನಿಂದ ಇಳಿದು ನಡೆದು ಹೊರಟಿದ್ದಾಗ ಏಕಾಏಕಿ ಗಾಬರಿಗೊಂಡರು. ತಾವು ಮಾಸ್ಕ್ ಧರಿಸಿಲ್ಲ ಎಂಬುದು ಅರಿವಿಗೆ ಬಂದಿದೆ. ತಕ್ಷಣವೇ ಆಕೆ ಬಾಯಿ ಮುಚ್ಚಿಕೊಂಡು ಕಾರಿನತ್ತ ಗಾಬರಿಯಿಂದ ಹೆಜ್ಜೆ ಹಾಕಿದ್ದಾರೆ. ಅಲ್ಲಿದ್ದ ಅಧಿಕಾರಿಗಳು ಸಚಿವರ ರಕ್ಷಣೆಗೆ ಬಂದಿದ್ದು, ಮಾಸ್ಕ್ ನೀಡಿದ್ದಾರೆ.
ಮಂಗಳವಾರ ನಡೆದ ಆಚರಣೆಗಳಲ್ಲಿ ಟ್ಯಾಂಕರ್ ಪ್ರದರ್ಶನ, ಪರೇಡ್ ರದ್ದು ಮಾಡಲಾಗಿತ್ತು. ಕರೋನಾ ಹಿನ್ನೆಲೆಯಲ್ಲಿ ಅವೆಲ್ಲವನ್ನು ರದ್ದು ಮಾಡಲಾಗಿತ್ತು. ಸದ್ಯ ಫ್ರಾನ್ಸ್ ನಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ.