ವಿಶ್ವದೆಲ್ಲೆಡೆ ಭಾರಿ ಅವಾಂತರ ಸೃಷ್ಟಿಸಿರುವ ಕೊರೋನಾದಿಂದ ಅನೇಕರು ಮನೆಯಿಂದ ಆಚೆ ಬಾರದ ರೀತಿಯಲ್ಲಾಗಿದೆ. ಆರಂಭದಲ್ಲಿ ಮನೆಯಲ್ಲಿ ಸಮಯ ಕಳೆಯಬಹುದೆಂದು ಅನೇಕರು ಖುಷಿಯಾಗಿದ್ದರೂ, ನಂತರದ ದಿನದಲ್ಲಿ ಮನೆಯಲ್ಲೇ ಲಾಕ್ ಆಗಿರುವುದು ಬೇಸರ ತರಿಸಿದೆ. ಇದು ಕೇವಲ ಹಿರಿಯರಿಗೆ ಮಾತ್ರವಲ್ಲದೇ ಮಕ್ಕಳಿಗೂ ಇದೇ ಪರಿಸ್ಥಿತಿ ಎದುರಾಗಿದೆ.
ತಮ್ಮ ಲಾಕ್ ಡೌನ್ ಸಮಯದ ಅನೇಕರು ತಮ್ಮ ಬೇಸರದ ದಿನಗಳನ್ನು ಹೇಳಿಕೊಂಡಿದ್ದರು. ಆದರೀಗ ನಾಲ್ಕು ವರ್ಷದ ಬಾಲಕಿಯೊಬ್ಬಳು ತಮ್ಮ ಲಾಕ್ ಡೌನ್ ಸಮಸ್ಯೆಯ ಬಗ್ಗೆ ಹೇಳಿಕೊಂಡಿರುವುದು ಇದೀಗ ಭಾರಿ ವೈರಲ್ ಆಗಿದೆ. ನಾಲ್ಕು ವರ್ಷದ ಬಾಲಕಿಯ ವಿಡಿಯೊವನ್ನು ಸುಲೇಖಾ ಎನ್ನುವವರು ಹಾಕಿದ್ದಾರೆ. ಆ ಬಾಲಕಿಯ ಪ್ರಕಾರ ತನ್ನ ನೆಚ್ಚಿನ ಸ್ಥಳಗಳು ಕೊರೋನಾ ಲಾಕ್‌ಡೌನ್‌ನಿಂದ ಮುಚ್ಚಿವೆ ಎಂದು ಬೇಸರ ಹೊರಹಾಕಿದ್ದಾಳೆ.
ಮ್ಯಾಕ್ ಡೊನಾಲ್ಡ್, ಪಾರ್ಕ್ ಸೇರಿದಂತೆ ಹಲವು ಭಾಗಗಳನ್ನು ಕಾರಿನಲ್ಲಿಯೇ ಕುಳಿತುಕೊಂಡು ನೋಡಬೇಕಿದೆ. ಹೋಟೆಲ್‌ನಲ್ಲಿ ತಿನ್ನಬೇಕಿದ್ದ ಆಹಾರವನ್ನು ಕಾರಿನಲ್ಲಿ ಕುಳಿತುಕೊಂಡು ತಿನ್ನಬೇಕಿದೆ. ಇದು ನನಗೆ ತುಂಬಾ ನೋವು ತರಿಸಿದೆ ಎಂದು ಹೇಳಿಕೊಂಡಿದ್ದಾಳೆ. ಇದೀಗ ಈ ವಿಡಿಯೊ ಎಂಟು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಲಕ್ಷಾಂತರ ಮಂದಿ ಕಾಮೆಂಟ್ ಮಾಡಿದ್ದು, ಅನೇಕರು ಲೈಕ್ ಮಾಡಿದ್ದಾರೆ.
https://twitter.com/Ngu_Spesh/status/1281259100450566146?ref_src=twsrc%5Etfw%7Ctwcamp%5Etweetembed%7Ctwterm%5E1281259100450566146%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fonly-thing-that-is-open-is-nothing-little-girls-rant-on-lockdown-is-relatable-for-netizens%2F620522