ನಗರಗಳ ಹೆಸರುಗಳನ್ನು ಬದಲಿಸಬೇಕೆಂಬ ಕೂಗು ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್ ಅನ್ನೂ ಮುಟ್ಟಿದೆ. ಬಾಂಗ್ಲಾ ದೇಶ ಮೂಲದ ಅಹ್ಯಾಂ ಅಬ್ರಾರ್ ಎಂಬಾತ ಆನ್ಲೈನ್‌ನಲ್ಲಿ ಅಭಿಯಾನ ಆರಂಭಿಸಿದ್ದು, ’ಇಸ್ಲಾಮಾಬಾದ್’ ಅನ್ನು ’ಇಸ್ಲಾಮಾಗುಡ್’ ಎಂದು ಬದಲಿಸುವಂತೆ ಸೂಚಿಸಿದ್ದಾರೆ.
“ಇಸ್ಲಾಂ ಒಳ್ಳೆಯದು. ಪಾಕಿಸ್ತಾನ ಇಸ್ಲಾಂ ಅನ್ನು ಪ್ರೀತಿಸುತ್ತದೆ. ಹೀಗಿರುವಾಗ IslamaBAD ಏಕೆ? ಲವ್ ಫ್ರಂ ಬಾಂಗ್ಲಾದೇಶ್” ಎಂದು ಚೇಂಜ್.ಆರ್ಗ್ ಎಂಬ ತನ್ನ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗೆ ಇದುವರೆಗೂ 300ಕ್ಕೂ ಅಧಿಕ ಸಹಿಗಳು ಬಿದ್ದಿವೆ.
ಭ್ರಷ್ಟರಿಗೆ ಸಿಬಿಐ ಬಿಗ್ ಶಾಕ್: ಸಾರ್ವಜನಿಕರಿಗೆ ಮಹತ್ವದ ಸೂಚನೆ
ಅದು ಇಸ್ಲಾಮ್ + ಅಬಾದ್ ಆಗಿದ್ದು, ಇಲ್ಲಿ ತಿಳಿಸಿರುವಂತೆ ಇಸ್ಲಾಮಾ + ಬ್ಯಾಡ್ ಅಲ್ಲ ಎಂದು ಕೆಲ ನೆಟ್ಟಿಗರು ವಿವರಿಸಿ ಹೇಳಿದ್ದರೆ ಇನ್ನಷ್ಟು ಮಂದಿ ’ಹೌದಲ್ಲ..! ಸೂಚಿತ ಹೆಸರು ಚೆನ್ನಾಗಿದೆ…!” ಎಂದು ಅಭಿಯಾನಕ್ಕೆ ಬೆಂಬಲ ಕೊಟ್ಟಿದ್ದಾರೆ.
https://twitter.com/seroquelshawty/status/1362726368635744256?ref_src=twsrc%5Etfw%7Ctwcamp%5Etweetembed%7Ctwterm%5E1362726368635744256%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fonline-petition-to-change-islamabads-name-to-islamagood-has-received-over-300-signatures-3457922.html