ಕೊರೊನಾ ನಿಯಂತ್ರಣಕ್ಕೆ ಪ್ರತಿಕಾಯ ಬಹಳ ಮುಖ್ಯ. ಇದಕ್ಕಾಗಿ ಜನರು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಆದ್ರೆ ಅಮೆರಿಕಾದ ವರ್ಜೀನಿಯಾದ ಒಬ್ಬ ವ್ಯಕ್ತಿ ಸೂಪರ್ ಪ್ರತಿಕಾಯಗಳನ್ನು ಹೊಂದಿದ್ದಾನೆ. ಜಾನ್ ಹ್ಯಾಲಿಸ್ ಎಂಬ ವ್ಯಕ್ತಿಯ ದೇಹದಲ್ಲಿ ಇರುವ ಪ್ರತಿಕಾಯಗಳು ಕೊರೊನಾ ವೈರಸ್ ತೆಗೆದುಹಾಕುವಲ್ಲಿ ಸಂಪೂರ್ಣವಾಗಿ ಪರಿಣಾಮಕಾರಿ. ಜಾನ್ ಹಾಲಿಸ್ ಅವರ ಪ್ರತಿಕಾಯಗಳಿಂದ ಲಸಿಕೆಯನ್ನು ತಯಾರಿಸಬಹುದು ಎನ್ನಲಾಗ್ತಿದೆ. ಜಾನ್ ದೇಹದಲ್ಲಿ ಇರುವ ಪ್ರತಿಕಾಯಗಳು ಎಷ್ಟು ಶಕ್ತಿಯುತವಾಗಿವೆಯೆಂದರೆ, 10 ಸಾವಿರ ಬಾರಿ ದುರ್ಬಲಗೊಳಿಸಿದರೂ ಸಹ ಜಾನ್ ರೋಗವನ್ನು ಸೋಲಿಸುವ ಶಕ್ತಿ ಹೊಂದಿದ್ದಾನೆ.
ಜಾನ್ ಸ್ನೇಹಿತರಿಗೆ ಕೊರೊನಾ ಆಗಿತ್ತಂತೆ. ಇದ್ರಿಂದ ಜಾನ್ ತಂದೆ ಹೆದರಿದ್ದರಂತೆ. ಜಾನ್ ಗೆ ಕೊರೊನಾ ಆಗಲಿದೆ ಎಂಬ ಭಯದಲ್ಲಿದ್ದರಂತೆ. ಆದ್ರೆ ಜಾನ್ ಗೆ ಏನೂ ಆಗಿರಲಿಲ್ಲ. ಕೆಲ ದಿನಗಳ ನಂತ್ರ ಜಾನ್ ಸ್ನೇಹಿತರು ಚೇತರಿಸಿಕೊಂಡು ಮನೆಗೆ ಬಂದಿದ್ದರಂತೆ. ಈ ವೇಳೆ ವೈದ್ಯರು ಜಾನ್ ಪರೀಕ್ಷೆ ನಡೆಸಿದ್ದಾರೆ. ರಕ್ತ ಪರೀಕ್ಷೆ ಕೂಡ ನಡೆದಿದೆ.
10 ಲಕ್ಷ ರೂಪಾಯಿ ಒಳಗೆ ಮನೆ ನಿರ್ಮಿಸಿಕೊಳ್ಳುವವರಿಗೆ ‘ಗುಡ್ ನ್ಯೂಸ್’
ಪರೀಕ್ಷೆ ನಂತ್ರ ಜಾನ್ ಬಗ್ಗೆ ವೈದ್ಯರು ಹೇಳಿಕೆ ನೀಡಿದ್ದಾರೆ. ಜಾನ್ ಸೂಪರ್ ಪ್ರತಿಕಾಯ ಹೊಂದಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ. 10,000 ಬಾರಿ ಜಾನ್ ದುರ್ಬಲಗೊಳಿಸಿದರೂ ಅವನು ರೋಗವನ್ನು ಸೋಲಿಸಬಲ್ಲ ಎಂದು ಡಾಕ್ಟರ್ ಲ್ಯಾನ್ಸ್ ಹೇಳಿದ್ದಾರೆ.