alex Certify ಕೋವಿಡ್​ 19ಗೆ ಬಲಿಯಾದ ರೊಮೇನಿಯಾ ಹತ್ಯಾಕಾಂಡದ ಕೊನೆಯ ಪ್ರತ್ಯಕ್ಷದರ್ಶಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್​ 19ಗೆ ಬಲಿಯಾದ ರೊಮೇನಿಯಾ ಹತ್ಯಾಕಾಂಡದ ಕೊನೆಯ ಪ್ರತ್ಯಕ್ಷದರ್ಶಿ

ರೊಮೇನಿಯಾ ಹತ್ಯಾಕಾಂಡವನ್ನ ಕಂಡ ವಿಶ್ವದ ಕೊನೆಯ ಪ್ರತ್ಯಕ್ಷದರ್ಶಿ ಇಯಾನ್ಕು ಟುರ್ಕಮನ್​​ ಕಳೆದವಾರ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ. 98 ವರ್ಷ ಪ್ರಾಯದ ಟುರ್ಕಮನ್​ರನ್ನ ಕೋವಿಡ್​ ಮಾರ್ಗಸೂಚಿಯಂತೆ ಸಮಾಧಿ ಮಾಡಲಾಗಿದೆ.

ಬುಚಾರೆಸ್ಟ್​ನ ಟುಕರ್​ ಮ್ಯಾನ್ಸ್​ ಅಂತ್ಯಕ್ರಿಯೆ ಸೋಮವಾರ ನಡೆದಿದ್ದು ಡಜನ್​ಗಟ್ಟಲೇ ಜನರು ಭಾಗಿಯಾದ್ರು. ಎರಡನೇ ಮಹಾಯುದ್ದಕ್ಕೆ ಸಾಕ್ಷಿಯಾಗಿದ್ದ ಟುರ್ಕಮನ್​ ಅಂತ್ಯಕ್ರಿಯೆ ಶಿಷ್ಟಾಚಾರದಂತೆ ನಡೆದಿದೆ. ಕೊರೊನಾ ಸೋಂಕಿಗೆ ಒಳಗಾಗಿದ್ದ ಟುರ್ಕಮನ್​​ ಜನವರಿ 8ರಂದು ನಿಧನರಾದ್ರು.
ರೊಮೆನಿಯಾ ಕೊರೊನಾದಿಂದ ತೀವ್ರ ಹೊಡೆತ ತಿಂದ ರಾಷ್ಟ್ರಗಳ ಪೈಕಿ ಒಂದಾಗಿದ್ದು 19 ದಶಲಕ್ಷ ಜನಸಂಖ್ಯೆ ಹೊಂದಿರುವ ದೇಶದಲ್ಲಿ 16 ಸಾವಿರಕ್ಕೂ ಹೆಚ್ಚು ಸಾವು ಸಂಭವಿಸಿದೆ.

ಜೂನ್ 1941 ರಲ್ಲಿ ಟುಕರ್ಮನ್‌ಗೆ 18 ವರ್ಷ ವಯಸ್ಸಾಗಿತ್ತು, ಜರ್ಮನ್ ಮತ್ತು ನಾಜಿ ಪರ ರೊಮೇನಿಯನ್ ಪಡೆಗಳು ವಾಯುವ್ಯ ನಗರವಾದ ಇಯಾಸಿಯಲ್ಲಿ ಸಾವಿರಾರು ಇತರ ಯಹೂದಿಗಳನ್ನು “ಐಸಿ ಪೊಗ್ರೋಮ್” ಎಂದು ಕರೆಯಲಾಗುತ್ತಿತ್ತು. ಐಯಾಸಿ ಯಹೂದಿಗಳನ್ನು ರೈಲುಗಳಲ್ಲಿ ಸಿಲುಕಿಸಿ ರೊಮೇನಿಯಾ ಸುತ್ತಲೂ ಓಡಿಸಲಾಯಿತು, ಅವರಲ್ಲಿ ಹೆಚ್ಚಿನವರು ಉಸಿರುಗಟ್ಟಿಸುವವರೆಗೆ ಅಥವಾ ನಿರ್ಜಲೀಕರಣದಿಂದ ಸಾವನ್ನಪ್ಪಿದರು.

ರೊಮೆನಿಯನ್​ ಹತ್ಯಾಕಾಂಡದಿಂದಲೇ ಬಚಾವಾಗಿದ್ದ ಟುರ್ಕಮನ್​ ಕೊರೊನಾಗೆ ಬಲಿಯಾಗಿದ್ದು ಬೇಸರ ತಂದಿದೆ ಅಂತಾ ಇಸ್ರೇಲಿ ರಾಯಭಾರಿ ಡೇವಿಡ್​ ಸರಂಗ್​ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...