ಕೊರೊನಾ ವೈರಸ್ನಿಂದ ಬಚಾವಾದ ಹತ್ತು ರೋಗಿಗಳಲ್ಲಿ ಓರ್ವ ವ್ಯಕ್ತಿ ಸೋಂಕನ್ನ ಸೋಲಿಸಿದ ಮೂರು ತಿಂಗಳ ನಂತರವು ಶಾಶ್ವತ ರೋಗಲಕ್ಷಣದ ಸಮಸ್ಯೆ ಹೊಂದಿರುತ್ತಾರೆ ಅಂತಾ ಆಫೀಸ್ ಫಾರ್ ನ್ಯಾಷನಲ್ ಸ್ಟ್ಯಾಟಿಟಿಕ್ಸ್ ವರದಿ ನೀಡಿದೆ.
ಕೊರೊನಾ ವೈರಸ್ನಿಂದ ಬದುಕುಳಿದ 9.9 ಪ್ರತಿಶತದಷ್ಟು ಬ್ರಿಟಿಷ್ ನಾಗರಿಕರು ಸೋಂಕಿನಿಂದ ಗುಣಮುಖರಾದ ನಾಲ್ಕು ವಾರಗಳ ನಂತರವೂ ಶಾಶ್ವತ ಪರಿಣಾಮಗಳಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ.
ಆಯಾಸ, ತಲೆನೋವು, ನಿರಂತರ ಕೆಮ್ಮು ಸೇರಿದಂತೆ ವಿವಿಧ ಲಕ್ಷಣಗಳು ಕೊರೊನಾದಿಂದ ಗುಣಮುಖರಾದವರಲ್ಲಿಯೂ ಕಂಡು ಬಂದಿದೆ.
ಇದು ಮಾತ್ರವಲ್ಲದೇ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರಲ್ಲಿ ಹೃದಯಾಘಾತ ಹಾಗೂ ಪಾರ್ಶ್ವವಾಯು ಬರುವ ಸಾಧ್ಯತೆ 12 ಪಟ್ಟು ಹೆಚ್ಚಾಗಿರುತ್ತದೆಯಂತೆ. ಈ ರೀತಿ ಸೋಂಕಿನಿಂದ ಗುಣಮುಖರಾದ ಬಳಿಕವೂ ನಿರಂತರ ಸೋಂಕಿನಿಂದ ಬಳಲುವವರಿಗೆ ಲಾಂಗ್ ಕೋವಿಡ್ ರೋಗಿಗಳು ಎಂದು ಕರೆಯಲಾಗುತ್ತೆ.