ಆಸ್ಟ್ರಾಜೆನಿಕಾ – ಆಕ್ಸ್ಫರ್ಡ್ ನಿರ್ಮಿಸಿದ ಕೋವಿಶೀಲ್ಡ್ ಲಸಿಕೆಯ ಒಂದು ಡೋಸ್ ಕೊರೊನಾದಿಂದ ಉಂಟಾಗಬಲ್ಲ ಸಾವನ್ನ ತಡೆಗಟ್ಟುಬಲ್ಲಿ 80 ಪ್ರತಿಶತ ಪರಿಣಾಮಕಾರಿ ಎಂದು ಹೊಸ ಅಧ್ಯಯನವೊಂದು ಹೇಳಿದೆ.
ಇಂಗ್ಲೆಂಡ್ನ ಸಾರ್ವಜನಿಕ ಆರೋಗ್ಯ ಇಲಾಖೆ ಸೋಮವಾರ ಈ ಮಾಹಿತಿಯನ್ನ ಬಿಡುಗಡೆ ಮಾಡಿದೆ. ಆಸ್ಟ್ರಾಜೆನಿಕಾ ಲಸಿಕೆಯು ಕೋವಿಡ್ ಸಾವಿನಿಂದ ನೀಡುವ ರಕ್ಷಣೆಯ ಬಗ್ಗೆ ಮಾಡಿದ ಮೊದಲ ಅಧ್ಯಯನ ಇದಾಗಿದೆ.
ಈ ಅಧ್ಯಯನಕ್ಕಾಗಿ ಸಂಶೋಧಕರು ಡಿಸೆಂಬರ್ ಹಾಗೂ ಏಪ್ರಿಲ್ ತಿಂಗಳಲ್ಲಿ ಸೋಂಕಿಗೊಳಗಾದವರನ್ನ ಆಯ್ಕೆ ಮಾಡಿಕೊಂಡಿದ್ದರು. ಇದರಲ್ಲಿ ಲಸಿಕೆಯ ಮೊದಲ ಡೋಸ್ ಹಾಗೂ ಎರಡನೆ ಡೋಸ್ ಪಡೆದವರು ಕೋವಿಡ್ ಮರಣವನ್ನ ಹೇಗೆ ಜಯಿಸಬಲ್ಲರು ಎಂಬುದನ್ನ ಅಧ್ಯಯನ ಮಾಡಲಾಗಿದೆ.
ಈ ಅಧ್ಯಯನದಲ್ಲಿ, ಆಸ್ಟ್ರಾಜೆನಿಕಾ ಲಸಿಕೆಯ ಮೊದಲ ಡೋಸ್ ಪಡೆದವರು ಕೊರೊನಾ ಲಸಿಕೆಯನ್ನ ಪಡೆಯದವರಿಗೆ ಹೋಲಿಸಿದ್ರೆ ಕೊರೊನಾ ಮರಣದಿಂದ 55 ಪ್ರತಿಶತ ಸುರಕ್ಷಿತವಾಗಿರಲಿದ್ದಾರೆ. ಅದೇ ರೀತಿ ಫೈಜರ್ ಲಸಿಕೆಯ ಮೊದಲ ಡೋಸ್ ಪಡೆದವರು ಕೊರೊನಾ ಮರಣದಿಂದ 44 ಪ್ರತಿಶತ ಪ್ರಮಾಣದಷ್ಟು ಸೇಫ್ ಆಗಿರ್ತಾರೆ ಎಂದು ತಿಳಿದುಬಂದಿದೆ. ಒಟ್ಟಾರೆಯಾಗಿ ಕೋವಿಶೀಲ್ಡ್ ಪಡೆದ ವ್ಯಕ್ತಿ ಕೊರೊನಾ ಮರಣದಿಂದ 80 ಪ್ರತಿಶತದಷ್ಟು ಸೇಫ್ ಆಗಿರಲಿದ್ದಾನೆ ಎಂದು ಹೇಳಿದೆ.